ಉಡುಪಿ ನಗರ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ; ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಬಚಾವು
ಸಮಯಪ್ರಜ್ಞೆ ತೋರಿದ ಗೆಳೆಯ ಆದಿತ್ಯ ಮಂಗಳೂರು ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದಾನೆ. ಕರ್ತವ್ಯ ಪ್ರಜ್ಞೆ ಮೆರೆದ ಅಲ್ಲಿನ ಪೊಲೀಸರು ಮಂಗಳೂರಿನಿಂದ ಉಡುಪಿ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ, ರೋಹನ್ ನನ್ನು ಬಚಾವು ಮಾಡಿದ್ದಾರೆ.
ಉಡುಪಿ: ಉಡುಪಿ ನಗರ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಬಚಾವು ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ ರೋಹನ್ ರಾಜೇಶ್ ಜತ್ತನ ಎಂಬಾತ ಕೈ ಕೊಯ್ದುಕೊಂಡು ನರಳಾಡುತ್ತಿದ್ದ. ಕೈಕೊಯ್ದುಕೊಂಡ ರೋಹನ್ ಮಂಗಳೂರಿನ ಸ್ನೇಹಿತ ಆದಿತ್ಯನಿಗೆ ಕರೆ ಮಾಡಿದ್ದ.
ವಿಷಯ ತಿಳಿದು ಉಡುಪಿ ನಗರದಲ್ಲಿರುವ ಖಾಸಗಿ ಲಾಡ್ಜಿಗೆ ಪೊಲೀಸರು ದೌಡಾಯಿಸಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ದು ಪೊಲೀಸರು ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಉಡುಪಿ ನಗರಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ರೋಹನ್ ರಕ್ಷಣೆ ನಡೆದಿದೆ. ಸೂಕ್ತ ಚಿಕಿತ್ಸೆ ನೀಡಿ ವೈದ್ಯರು ರೋಹನ್ ನನ್ನು ಬದುಕಿಸಿದ್ದಾರೆ.