ಲಖನೌ: ಉತ್ತರಪ್ರದೇಶದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮೇ 24 ರವರೆಗೆ ಅಂದ್ರೆ 10 ದಿನಗಳವರೆಗೆ ಲಾಕ್​​ಡೌನ್ ವಿಸ್ತರಿಸಿದೆ.

ಪರಿಸ್ಥಿತಿಯನ್ನು ಪರಿಶೀಲಿಸಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಅದರ ಬೆನ್ನಲ್ಲೇ ಲಾಕ್​ಡೌನ್ ವಿಸ್ತರಣೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ, ಕೊರೊನಾ ಸೋಂಕು ರಾಜ್ಯದ ಗ್ರಾಮೀಣ ಭಾಗಗಳನ್ನು ತಲುಪಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಆತಂಕ ಹೆಚ್ಚಿದೆ ಎನ್ನಲಾಗಿದೆ.

ದೆಹಲಿ ಲಾಕ್​ಡೌನ್​ ಭವಿಷ್ಯ ಇಂದು ನಿರ್ಧಾರ
ಇನ್ನು ದೆಹಲಿಯಲ್ಲಿ ಮತ್ತೆ ಲಾಕ್​ಡೌನ್ ಮುಂದುವರೆಯಲಿದ್ಯಾ ಇಲ್ಲವಾ ಅನ್ನೋದು ಇಂದು ನಿರ್ಧಾರವಾಗಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಳೆದ ನಾಲ್ಕು ವಾರಗಳಿಂದ ಜಾರಿಯಲ್ಲಿರೋ ಲಾಕ್​​ಡೌನ್ ಇಂದಿಗೆ ಮುಕ್ತಾಯವಾಗಲಿದೆ. ಸತತ ಎರಡು ಬಾರಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಲಾಕ್​ಡೌನ್ ವಿಸ್ತರಿಸಿದ್ದರು. ಮತ್ತೊಂದು ವಾರ ಇದೇ ರೀತಿ ಲಾಕ್​ಡೌನ್ ಮುಂದುವರೆಸುವಂತೆ ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದಿನ ಕೇಜ್ರಿವಾಲ್ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.

 

 

The post ಉತ್ತರಪ್ರದೇಶದಲ್ಲಿ ಮೇ 24ರವರೆಗೂ ಲಾಕ್​ಡೌನ್ ವಿಸ್ತರಣೆ  appeared first on News First Kannada.

Source: newsfirstlive.com

Source link