ಲಖನೌ: ಉತ್ತರ ಪ್ರದೇಶದಲ್ಲಿ ಲಾಕ್​ಡೌನ್​ನಿಂದ​ ವಾಹನ ಸಂಚಾರ ಹಾಗೂ ಕಾರ್ಖಾನೆಗಳ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದೆ. ಈ ಹಿನ್ನೆಲೆ ಇಲ್ಲಿನ ಸಹರಾನ್ಪುರದಿಂದ ಹಿಮಾಲಯದ ದರ್ಶನವಾಗುತ್ತಿದೆ. ಹಿಮದಿಂದ ಆವೃತವಾದ ಪರ್ವತ ಶ್ರೇಣಿಯ ಅದ್ಭುತ ದೃಶ್ಯವನ್ನು ಸಹರಾನ್ಪರದ ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಏಪ್ರಿಲ್ 29 ಮತ್ತು 30ರಂದು ಇಂತಹ ದೃಶ್ಯ ಕಂಡು ಬಂದಿತ್ತು. ಈಗ ಎರಡನೇ ವರ್ಷವೂ ಇದೇ ದೃಶ್ಯ ಕಾಣಸಿಗುತ್ತಿದೆನೂರಾರು ಕಿಲೋ ಮೀಟರ್​ ದೂರದಿಂದ ತೆಗೆದ ಈ ವಿಡಿಯೋ ಎಲ್ಲರನ್ನು ಬೆರಗುಗೊಳಿಸುತ್ತಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.

The post ಉತ್ತರಪ್ರದೇಶದ ಸಹರಾನ್ಪುರದಿಂದ ಕಾಣ್ತಿದೆ ಹಿಮಾಲಯ ಪರ್ವತ appeared first on News First Kannada.

Source: newsfirstlive.com

Source link