ಉತ್ತರಾಖಂಡ: ಆಕ್ಸಿಜನ್ ಕೊರತೆ ಉಂಟಾದ ಬೆನ್ನಲ್ಲೇ ಉತ್ತರಾಖಂಡ್​ನ ಆಜಾದ್​ನಗರದಲ್ಲಿರೋ ರೂರ್ಕಿ ಆಸ್ಪತ್ರೆಯಲ್ಲಿ 5 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ.

ಸೋಮವಾರ ತಡರಾತ್ರಿ ರೂರ್ಕಿ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆ ಉಂಟಾಗಿದ್ದು, ರೋಗಿಗಳು ಪರದಾಟ ನಡೆಸಿದ್ರು. ವಿಷಯ ತಿಳಿದ ಬಳಿಕ ಕೆಲ ಹೊತ್ತಿನಲ್ಲಿ ಆಸ್ಪತ್ರೆ ಆಡಳಿತ ಮಂಡಳಿ 20 ಸಿಲಿಂಡರ್​ಗಳ ವ್ಯವಸ್ಥೆಯನ್ನ ಮಾಡಿತ್ತು.

ಆದ್ರೆ ಮಂಗಳವಾರ ನಸುಕಿನ ಜಾವ 4ಗಂಟೆ ಸುಮಾರಿಗೆ ಮತ್ತೆ ಆಕ್ಸಿಜನ್ ಖಾಲಿಯಾಗಿದ್ದು, ಆಮ್ಲಜನಕ ವ್ಯವಸ್ಥೆ ಮಾಡುವ ವೇಳೆಗೆ 5 ಕೊರೊನಾ ರೋಗಿಗಳು ಕೊನೆಯುಸಿರೆಳೆದಿದ್ದಾರೆ ಎಂದು ಹರಿದ್ವಾರದ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸೋದಕ್ಕೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.

The post ಉತ್ತರಾಖಂಡ್​ನಲ್ಲಿ ಆಕ್ಸಿಜನ್​ ಸಿಗದೇ 5 ಕೊರೊನಾ ರೋಗಿಗಳ ಸಾವು appeared first on News First Kannada.

Source: newsfirstlive.com

Source link