ಉತ್ತರಾಖಂಡ್​ನ ಮುಖ್ಯಮಂತ್ರಿಯಾಗಿ ಪುಷ್ಕರ್ ಪ್ರಮಾಣವಚನ ಸ್ವೀಕಾರ

ಉತ್ತರಾಖಂಡ್​ನ ಮುಖ್ಯಮಂತ್ರಿಯಾಗಿ ಪುಷ್ಕರ್ ಪ್ರಮಾಣವಚನ ಸ್ವೀಕಾರ

ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಇಂದು ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡೆಹ್ರಾಡೂನ್​ನ ರಾಜ್​ಭವನ್​ನಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆದಿದ್ದು ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ, ಪುಷ್ಕರ್ ಸಿಂಗ್ ಧಾಮಿಯವರಿಗೆ ಪ್ರಮಾಣವಚನ ಭೋದಿಸಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ತೀರಥ್ ಸಿಂಗ್ ರಾವತ್ ದಿಢೀರ್ ಮುಖ್ಯಮಂತ್ರಿ ಸ್ಥಾನದಿಂದದ ಕೆಳಗಿಳಿದ ಬೆನ್ನಲ್ಲೇ ಅಲ್ಲಿನ ಬಿಜೆಪಿ ಮುಖಂಡರು ಪುಷ್ಕರ್ ಸಿಂಗ್ ಧಾಮಿಯವರನ್ನು ಮುಖ್ಯ ಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದು ಇದೀಗ ಪುಷ್ಕರ್ ಅಧಿಕಾರ ವಹಿಸಿಕೊಂಡಿದ್ದಾರೆ. ಪುಷ್ಕರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆಪ್ತ ಎನ್ನಲಾಗಿದೆ.

ಪುಷ್ಕರ್ ಅವರ ಜೊತೆಗೆ ಎಮ್​ಎಲ್​ಎಗಳಾದ ಸತ್ಪಾಲ್ ಮಹರಾಜ್, ಹರಕ್ ಸಿಂಗ್ ರಾವತ್, ಬನ್ಸಿಂದರ್ ಭಗತ್ ಮತ್ತು ಯಶ್​ಪಾಲ್ ಆರ್ಯ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

The post ಉತ್ತರಾಖಂಡ್​ನ ಮುಖ್ಯಮಂತ್ರಿಯಾಗಿ ಪುಷ್ಕರ್ ಪ್ರಮಾಣವಚನ ಸ್ವೀಕಾರ appeared first on News First Kannada.

Source: newsfirstlive.com

Source link