ಉತ್ತರಾಖಂಡ: ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದ ಅಜಯ್ ಕೊಥಿಯಾಲ್ ಬಿಜೆಪಿಗೆ ಸೇರ್ಪಡೆ | AAP’s Uttarakhand chief ministerial candidate Ajay Kothiyal joins BJP


ಉತ್ತರಾಖಂಡ: ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದ ಅಜಯ್ ಕೊಥಿಯಾಲ್ ಬಿಜೆಪಿಗೆ ಸೇರ್ಪಡೆ

ಅಜಯ್ ಕೊಥಿಯಾಲ್

ಕಳೆದ ವಾರ ಕೊಥಿಯಾಲ್ ಆಮ್ ಆದ್ಮಿ ಪಕ್ಷ ತೊರೆದಿದ್ದರು. ಎಎಪಿ ತೊರೆಯುವುದಾಗಿ ಟ್ವಿಟರ್ ನಲ್ಲಿ ಘೋಷಿಸಿದ ಕೊಥಿಯಾಲ್ ಅಲ್ಲೇ ರಾಜೀನಾಮೆ ಪತ್ರವನ್ನೂ ಟ್ವೀಟ್ ಮಾಡಿದ್ದರು

ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ, ನಿವೃತ್ತ ಕರ್ನಲ್ ಅಜಯ್ ಕೊಥಿಯಾಲ್ (Ajay Kothiyal) ಅವರು ಡೆಹ್ರಾಡೂನ್‌ನಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಬಿಜೆಪಿ (BJP) ಸೇರಿದ್ದಾರೆ. ಕಳೆದ ವಾರ ಕೊಥಿಯಾಲ್ ಆಮ್ ಆದ್ಮಿ ಪಕ್ಷ ತೊರೆದಿದ್ದರು. ಎಎಪಿ ತೊರೆಯುವುದಾಗಿ ಟ್ವಿಟರ್ ನಲ್ಲಿ ಘೋಷಿಸಿದ ಕೊಥಿಯಾಲ್ ಅಲ್ಲೇ ರಾಜೀನಾಮೆ ಪತ್ರವನ್ನೂ ಟ್ವೀಟ್ ಮಾಡಿದ್ದರು. ನಾನು ಏಪ್ರಿಲ್ 19, 2021 ರಿಂದ ಮೇ 18, 2022 ರವರೆಗೆ ಆಮ್ ಆದ್ಮಿ ಪಕ್ಷದ ಸದಸ್ಯನಾಗಿದ್ದೇನೆ. ಮಾಜಿ ಸೈನಿಕರು, ಮಾಜಿ ಅರೆ ಮಿಲಿಟರಿ ಸಿಬ್ಬಂದಿ, ಹಿರಿಯರು, ಮಹಿಳೆಯರು, ಯುವಕರು ಮತ್ತು ಬುದ್ಧಿಜೀವಿಗಳ ಭಾವನೆಗಳನ್ನು ಇಟ್ಟುಕೊಂಡು ನಾನು ನಿಮಗೆ ಮೇ 18 ರಂದು ನನ್ನ ರಾಜೀನಾಮೆ ಕಳುಹಿಸುತ್ತಿದ್ದೇನೆ ಎಂದು ಕೊಥಿಯಾಲ್ ಟ್ವೀಟ್ ಮಾಡಿದ್ದರು.

ಈ ವರ್ಷದ ಮಾರ್ಚ್‌ನಲ್ಲಿ ಆಡಳಿತಾರೂಢ ಬಿಜೆಪಿ ಉತ್ತರಾಖಂಡದಲ್ಲಿ 47 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಮರಳಿತು. ಬಿಜೆಪಿ 70 ಸ್ಥಾನಗಳ ಅಸೆಂಬ್ಲಿಯಲ್ಲಿ ಅಗತ್ಯವಿರುವ ಬಹುಮತಕ್ಕಿಂತ 11 ಹೆಚ್ಚು ಸೀಟುಗಳನ್ನು ಗಳಿಸಿತ್ತು. ಎಎಪಿಗೆ ಯಾವುದೇ ಸೀಟು ಲಭಿಸಿಲ್ಲ. ಮತ್ತೊಮ್ಮೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದಿದ್ದು, ಬಹುಜನ ಸಮಾಜ ಪಕ್ಷ (ಬಿಎಸ್​​ಪಿ) ಎರಡು ಕ್ಷೇತ್ರಗಳನ್ನು ಗೆದ್ದಿತ್ತು.

TV9 Kannada


Leave a Reply

Your email address will not be published. Required fields are marked *