ಉತ್ತರಕನ್ನಡ: ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಮುಂದುವರೆದಿದ್ದು, ಕರಾವಳಿ ಭಾಗದಲ್ಲಿ ಗಾಳಿಯ ಅಬ್ಬರ ಜೋರಾಗಿದೆ. ಭಾರೀ ಬಿರುಗಾಳಿಗೆ ಹಲವೆಡೆ ಮರಗಳು ಹಾಗೂ ಲೈಟ್ ಕಂಬಗಳು ರಸ್ತೆಗೆ ಉರುಳಿವೆ.

 

ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಕುಮಟಾ ತಾಲೂಕಿನ ತದಡಿ, ವನ್ನಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ಹಾಗೂ ಹೊನ್ನಾವರ ತಾಲೂಕಿನ ಕೆಲ ಕಡಲ ತೀರದ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.

ಕುಮಟಾದಲ್ಲಿ 40 ಹಾಗೂ ಹೊನ್ನಾವರದಲ್ಲಿ 60 ಜನರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

The post ಉತ್ತರ ಕನ್ನಡದಲ್ಲಿ ತೌಕ್ತೆ ಅಬ್ಬರ; ಧರೆಗುರುಳಿದ ಮರ-ಲೈಟ್ ಕಂಬಗಳು appeared first on News First Kannada.

Source: newsfirstlive.com

Source link