ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯ ಮೂಲಕ ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾದ “ಉಷಾರ್” – ‘ಕರ್ನಾಟಕ ಕೊರೋನ ಜಾಗೃತಿ’ ಅಭಿಯಾನವನ್ನ ಪ್ರಾರಂಭಿಸಿದ್ದಾರೆ.

ಹೌದು.. ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 70 – 80  ಸಾವುಗಳಾಗಿರುವುದನ್ನ ಅರಿತು ಖುದ್ದಾಗಿ ಬೆಂಗಳೂರಿನಿಂದ 12 ಗಂಟೆಗಳ ಕಾಲ ಅವರ ತಂಡದೊಡನೆ ಪಯಣ ಬೆಳಸಿದ್ದಾರೆ ಭುವನ್​ ಹಾಗೂ ಹರ್ಷಿಕಾ. ಅಲ್ಲಿಯ ಜನರನ್ನ ಭೇಟಿ ಮಾಡಿ ಅವರ ತೊಂದರೆಗಳನ್ನ ಆಲಿಸಿ, ಕೊರೊನಾ ಪೀಡಿತ 50 ಸಂಸಾರಗಳ ಮನೆಗೆ ತಾವೇ ತೆರಳಿ ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು ,ದಿನಸಿ, ಔಷದಿ ಮತ್ತು ಮಾಸ್ಕ್​ಗಳನ್ನೂ ಎಲ್ಲಾ ಬಡ ಕುಟುಂಬಗಳಿಗೆ ಹಂಚಿದ್ದಾರೆ.

ಈಗಾಗಲೇ ಭುವನ್​ ಹಾಗೂ ಹರ್ಷಿಕಾ ಪೂಣಚ್ಚ ತಮ್ಮ ತಂಡದ ಜೊತೆ ತಮ್ಮೂರು ಮಡಿಕೇರಿಯ ಸುತ್ತಮುತ್ತ ಎಲ್ಲಾ ಕೊರೊನಾ ಪೀಡಿತರ ಮನೆಗಳಿಗೆ ದಿನಸಿ ಕಿಟ್​ಗಳನ್ನ, ತರಕಾರಿ ಹಾಗೂ ಮೆಡಿಸಿನ್​ ಕಿಟ್​ಗಳನ್ನ ನೀಡಿ ಸಹಕರಿಸಿದ್ದರು. ಇದಲ್ಲದೇ, ಮಡಿಕೇರಿಯಲ್ಲಿ ಕೊರೊನಾ ಬಂದು ಆಸ್ಪತ್ರೆ ಸೇರಿರುವ ರೋಗಿಗಳು ಖಿನ್ನತೆಗೆ ಒಳಗಾಗಬಾರದು ಅನ್ನೋ ಕಾರಣಕ್ಕೆ, ಆಸ್ಪತ್ರೆಗಳಿಗೆ ತೆರಳಿ ಸೋಂಕಿತರ ಜೊತೆ ಒಳ್ಳೆಯ ಕಾಲ ಕಳೆದು ಡ್ಯಾನ್ಸ್​​ ಮಾಡಿ ಮನರಂಜಿಸಿದ್ದರು.

 

The post ಉತ್ತರ ಕರ್ನಾಟಕದ ಗ್ರಾಮ-ಗ್ರಾಮಗಳಿಗೂ ಭುವನ್-ಹರ್ಷಿಕಾ ಭೇಟಿ; ಸಹಾಯದ ಜೊತೆ ಜಾಗೃತಿ appeared first on News First Kannada.

Source: newsfirstlive.com

Source link