ಉತ್ತರ ಪ್ರದೇಶದಲ್ಲಿ ಅಖಿಲೇಶ್​ ಯಾದವ್-ಪ್ರಿಯಾಂಕಾ ಗಾಂಧಿ ಮುಖಾಮುಖಿ


ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪ್ರಚಾರ ಮಾಡುವಾಗ ಮುಖಾಮುಖಿಯಾಗಿದ್ದಾರೆ.

ಈ ಸಮಯದಲ್ಲಿ ಅಖಿಲೇಶ್ ಹಾಗೂ ಪ್ರಿಯಾಂಕಾ ಪರಸ್ಪರ ನಗುತ್ತಾ ಕೈಬೀಸಿ ಅಭಿನಂದಿಸಿದ್ದಾರೆ. ಈ ವೇಳೆ ಕಾರ್ಯಕರ್ತರು ಕೂಡ ತಮ್ಮ, ತಮ್ಮ ಪಕ್ಷದ ಪರ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದ್ದಾರೆ. ಈ ಘಟನೆ ಕಾಂಗ್ರೆಸ್​​ ಮತ್ತು ಸಮಾಜವಾದಿ ಪಕ್ಷದ ನಡುವಿನ ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಪ್ರಿಯಾಂಕಾ ತೆರೆದ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಹಾಗೂ ಅಖಿಲೇಶ್ ಯಾದವ್​ ಪ್ರಚಾರಕ್ಕಾಗಿ ಬಸ್‌ನಲ್ಲಿದ್ದರು. ಘಟನೆಯ ವಿಡಿಯೋವನ್ನು ಪ್ರಿಯಾಂಕಾ ‘ಹುಮಾರಾ ಭಿ ಆಪ್ಕೋ ರಾಮ್ ರಾಮ್’ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ.

News First Live Kannada


Leave a Reply

Your email address will not be published.