
ಟಿಟಿ ವಾಹನ ಮತ್ತು ಲಾರಿ ನಡುವೆ ಅಪಘಾತ ನಡೆದಿದೆ
ಬೆಳಗ್ಗೆ 10 ಗಂಟೆಗೆ ಲಖನೌನಿಂದ ವಿಮಾನದಲ್ಲಿ ಮೃತದೇಹಗಳನ್ನ ರವಾನೆ ಮಾಡಲಾಗುತ್ತದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ವಿಮಾನ ಹೈದರಾಬಾದ್ ತಲುಪುತ್ತದೆ. ನಂತರ ಌಂಬುಲೆನ್ಸ್ ಮೂಲಕ ಮೃತದೇಹಗಳು ಹುಟ್ಟೂರಿಗೆ ಬರಲಿವೆ.
ಬೀದರ್: ಉತ್ತರ ಪ್ರದೇಶದ (Uttar Pradesh) ಲಖೀಂಪುರ ಖೇರಿ ಬಳಿ ನಿನ್ನೆ (ಮೇ 29) ಸಂಭವಿಸಿದ ಅಪಘಾತದಲ್ಲಿ (Accident) ಒಂದೇ ಕುಟುಂಬದ ಎಂಟು ಜನರು ಮೃತಪಟ್ಟಿದ್ದಾರೆ. 8 ಮೃತದೇಹಗಳನ್ನ ಇಂದು ಬೀದರ್ಗೆ ತರಲಾಗುತ್ತದೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮೃತದೇಹಗಳು ಬೀದರ್ ತಲುಪಲಿವೆ. ಬೆಳಗ್ಗೆ 10 ಗಂಟೆಗೆ ಲಖನೌನಿಂದ ವಿಮಾನದಲ್ಲಿ ಮೃತದೇಹಗಳನ್ನ ರವಾನೆ ಮಾಡಲಾಗುತ್ತದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ವಿಮಾನ ಹೈದರಾಬಾದ್ ತಲುಪುತ್ತದೆ. ನಂತರ ಆ್ಯಂಬುಲೆನ್ಸ್ ಮೂಲಕ ಮೃತದೇಹಗಳು ಹುಟ್ಟೂರಿಗೆ ಬರಲಿವೆ.
ಅಯೋಧ್ಯೆಗೆ ತೆರಳುತ್ತಿದ್ದಾಗ ಟಿಟಿಗೆ ಟ್ರಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಎಂಟು ಜನರು ಸಾವಿಗೀಡಾಗಿದ್ದಾರೆ. ಶವಗಳನ್ನ ಶವಗಳನ್ನು ಕಳುಹಿಸಿ ಕೊಡಲು ವ್ಯವಸ್ಥೆ ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಪ್ರದೇಶ ಸಿಎಂ ಯೋಗಿಗೆ ಮನವಿ ಮಾಡಿದ್ದರು. ಘಟನೆಯಲ್ಲಿ ಸುಮಾರು 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು 8 ಜನರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಕುಮಾರ್(28), ಜಗದಾಂಬಾ(52), ಮನ್ಮಥ(36), ಅನಿಲ್(30) ಸಂತೋಷ(29), ಶಶಿಕಲಾ(38), ಸರಸ್ವತಿ(42) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.