ಉತ್ತರ ಪ್ರದೇಶ: ಸಮವಸ್ತ್ರ ಧರಿಸದ ದಲಿತ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ, ಶಾಲೆಯಿಂದ ಹೊರದಬ್ಬಿದ ಗ್ರಾಮದ ಮಾಜಿ ಮುಖ್ಯಸ್ಥ | Dalit girl faced casteist slurs, beaten up and thrown out of her school Over Uniform in Uttar Pradesh


ಮನೋಜ್ ಕುಮಾರ್ ದುಬೆ ಎಂಬ ವ್ಯಕ್ತಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದುಬೆ ಶಾಲೆಯ ಅಧಿಕಾರಿಯೂ ಅಲ್ಲ ಶಿಕ್ಷಕನೂ ಅಲ್ಲ

ಉತ್ತರ ಪ್ರದೇಶ: ಸಮವಸ್ತ್ರ ಧರಿಸದ ದಲಿತ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ, ಶಾಲೆಯಿಂದ ಹೊರದಬ್ಬಿದ ಗ್ರಾಮದ ಮಾಜಿ ಮುಖ್ಯಸ್ಥ

ಉತ್ತರ ಪ್ರದೇಶ ಪೊಲೀಸರು

ಭದೋಹಿ: ಶಾಲೆಯಲ್ಲಿ ಸಮವಸ್ತ್ರ ಧರಿಸದೆ ಇದ್ದುದಕ್ಕೆ ದಲಿತ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಶಾಲೆಯಿಂದ ಹೊರದಬ್ಬಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿದ್ಯಾರ್ಥಿನಿ ಜತೆ ಈ ರೀತಿ ವರ್ತಿಸಿದ್ದು ಶಾಲೆಯ ಶಿಕ್ಷಕರು ಅಥವಾ ಆಡಳಿತಾಧಿಕಾರಿಗಳು ಅಲ್ಲ, ಅಲ್ಲಿನ ಗ್ರಾಮದ ಮಾಜಿ ಮುಖ್ಯಸ್ಥ!. ಮನೋಜ್ ಕುಮಾರ್ ದುಬೆ ಎಂಬ ವ್ಯಕ್ತಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದುಬೆ ಶಾಲೆಯ ಅಧಿಕಾರಿಯೂ ಅಲ್ಲ ಶಿಕ್ಷಕನೂ ಅಲ್ಲ. ಆದರೆ ಈತ ದಿನಾ ಶಾಲೆಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳು ಶಿಕ್ಷಕರ ಜತೆ ಕೆಟ್ಟದಾಗಿ ವರ್ತಿಸುತ್ತಿದ್ದ ಎಂದಿದ್ದಾರೆ ಪೊಲೀಸರು. ಇಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ ಮನೋಜ್ ಕುಮಾರ್ ದುಬೆ ಎಂಟನೇ ತರಗತಿಯ ವಿದ್ಯಾರ್ಥಿನಿಯಲ್ಲಿ ಯಾಕೆ ಸಮವಸ್ತ್ರ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ ಎಂದು ಚೌರಿ ಪೊಲೀಸ್ ಠಾಣೆಯ ಇನ್ ಚಾರ್ಜ್ ಗಿರಿಜಾ ಶಂಕರ್ ಯಾದವ್ ಹೇಳಿದ್ದಾರೆ.

ಇದಕ್ಕೆ ಆ ವಿದ್ಯಾರ್ಥಿನಿ ಶಾಲಾ ಸಮವಸ್ತ್ರ ಖರೀದಿ ಮಾಡಿಲ್ಲ. ಅಪ್ಪ ನನಗೆ ತಂದುಕೊಟ್ಟ ನಂತರ ನಾನು ಸಮವಸ್ತ್ರ ಧರಿಸಿ ಬರುವೆ ಎಂದು ಹೇಳಿದ್ದಾಳೆ. ಇದನ್ನು ಕೇಳಿದೊಡನೆ ದುಬೆ ಬಾಲಕಿ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಬೈದಿದ್ದಾರೆ. ಆಮೇಲೆ ಆಕೆಯನ್ನು ಶಾಲೆಯಿಂದ ಹೊರದಬ್ಬಿದ್ದಾರೆ ಎಂದು ಯಾದವ್ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.