ಉತ್ಪಾದನಾ ವೆಚ್ಚ ಉಳಿಸಲು ಮಕ್ಕಳ ಔಷಧಿಗಳಲ್ಲಿ ಜೀವಹಂತಕ ರಾಸಾಯನಿಕ ಬಳಕೆ, ಭಾರತದಲ್ಲೂ ಸಂಭವಿಸಿತ್ತು ಗಾಂಬಿಯಾದಂಥ ದುರಂತ | Toxins to save cost Cough syrups that killed Gambian kids not sold in India


ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವಿಗೆ ಕಾರಣವಾಗಿದ್ದು ಕೆಮ್ಮು ಮತ್ತು ಶೀತ ಸಿರಪ್‌ಗಳಲ್ಲಿನ ಡೈಎಥಿಲೀನ್ ಗ್ಲೈಕಾಲ್ (DEG) ಮತ್ತು ಎಥಿಲೀನ್ ಗ್ಲೈಕೋಲ್ ರಾಸಾಯನಿಕ ಎಂದು WHO ಹೇಳಿದೆ.

ಉತ್ಪಾದನಾ ವೆಚ್ಚ ಉಳಿಸಲು ಮಕ್ಕಳ ಔಷಧಿಗಳಲ್ಲಿ ಜೀವಹಂತಕ ರಾಸಾಯನಿಕ ಬಳಕೆ, ಭಾರತದಲ್ಲೂ ಸಂಭವಿಸಿತ್ತು ಗಾಂಬಿಯಾದಂಥ ದುರಂತ

ಪ್ರಾತಿನಿಧಿಕ ಚಿತ್ರ

ಭಾರತೀಯ ಔಷಧ ಕಂಪನಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ  ಗಾಂಬಿಯಾದಲ್ಲಿ (Gambia) 66 ಮಕ್ಕಳು ಸಾವಿಗೀಡಾಗಿದ್ದಾರೆ. ಏತನ್ಮಧ್ಯೆ ಈ ಕೆಮ್ಮು ಸಿರಪ್‌ಗಳನ್ನು (cough syrups) ಸ್ಥಳೀಯವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿಲ್ಲ. ಆದರೆ ರಫ್ತು ಮಾಡಲಾಗುತ್ತಿದೆ ಎಂದು ಉದ್ಯಮ ಮತ್ತು ಸರ್ಕಾರಿ ಮೂಲಗಳು ಮನಿ ಕಂಟ್ರೋಲ್‌ಗೆ ತಿಳಿಸಿವೆ. ಅಕ್ಟೋಬರ್ 5 ರಂದು ಏಜೆನ್ಸಿ ಘೋಷಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾಥಮಿಕ ತನಿಖೆಯು ನವದೆಹಲಿ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಸಿರಪ್‌ಗಳು ಗಾಂಬಿಯಾದಲ್ಲಿ ಕಳೆದ ಕೆಲವು ವಾರಗಳಲ್ಲಿ ಕನಿಷ್ಠ 66 ಮಕ್ಕಳ ಸಾವಿಗೆ ಕಾರಣವಾಗಿವೆ ಎಂದು ತೋರಿಸಿದೆ. ನಮ್ಮ ಮಾಹಿತಿಯ ಪ್ರಕಾರ, ಔಷಧಿಗಳನ್ನು ಭಾರತದಲ್ಲಿ ಎಲ್ಲಿಯೂ ಮಾರಾಟ ಮಾಡಲಾಗುತ್ತಿಲ್ಲ ಅವುಗಳನ್ನು ಹೊರದೇಶಕ್ಕೆ ಕಳುಹಿಸಲಾಗುತ್ತದೆ ಎಂದು ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್‌ಗಳ ರಾಜೀವ್ ಸಿಂಘಾಲ್ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತೀಯ ಔಷಧ ತಯಾರಕರ ಸಂಘದ ಅಧ್ಯಕ್ಷ ವಿರಾಂಚಿ ಶಾ ಕೂಡ ಇದನ್ನು ದೃಢಪಡಿಸಿದ್ದು, ಮೇಡನ್ ಫಾರ್ಮಾ ಅದರ ಸದಸ್ಯರಲ್ಲ ಎಂದು ಹೇಳಿದ್ದಾರೆ.
ಪ್ರೋಮೆಥಾಜಿನ್ ಓರಲ್ ಸೊಲ್ಯೂಷನ್, ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಕೋಫ್ ಬೇಬಿ ಕೆಮ್ಮಿನ ಸಿರಪ್- ಇವು ಮಾರಣಾಂತಿಕ ಕಲ್ಮಶಗಳನ್ನು ಹೊಂದಿರುವ ಔಷಧಿಗಳು ಎಂದು ಪತ್ತೆಯಾಗಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ ಗೆ ಸಂಬಂಧಿಸಿದ ಧಿಕಾರಿಯೊಬ್ಬರು, ಔಷಧ ತಯಾರಕರು ಔಷಧಗಳನ್ನು ತಯಾರಿಸಲು ರಾಜ್ಯ ಔಷಧ ನಿರ್ವಾಹಕರಿಂದ ಪರವಾನಗಿ ಪಡೆದಿರುವುರ ಬಗ್ಗೆ ಪ್ರಶ್ನೆ ಎತ್ತಲಾಗಿದೆ.

ಇಲ್ಲಿಯವರೆಗೆ ಪಶ್ಚಿಮ ಆಫ್ರಿಕಾದ ಗಾಂಬಿಯಾಗೆ ಮಾತ್ರ ಈ ಔಷಧಿಯನ್ನು ಆಮದು ಮಾಡಲಾಗಿದೆ.
ಇಂಥಾ ಸಂದರ್ಭಗಳಲ್ಲಿ ಆಮದು ಮಾಡಿಕೊಳ್ಳುವ ದೇಶವು ಬ್ಯಾಚ್‌ಗಳನ್ನು ಮಾರಾಟಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಗುಣಮಟ್ಟದ ನಿಯತಾಂಕಗಳ ಮೇಲೆ ಉತ್ಪನ್ನಗಳನ್ನು ಪರೀಕ್ಷಿಸುವ ಅಗತ್ಯವಿದೆ” ಎಂದು ಅಧಿಕಾರಿ ಹೇಳಿದ್ದಾರೆ

ವೆಚ್ಚ ಉಳಿಸುವುದಕ್ಕಾಗಿ ವಿಷ?

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವಿಗೆ ಕಾರಣವಾಗಿದ್ದು ಕೆಮ್ಮು ಮತ್ತು ಶೀತ ಸಿರಪ್‌ಗಳಲ್ಲಿನ ಡೈಎಥಿಲೀನ್ ಗ್ಲೈಕಾಲ್ (DEG) ಮತ್ತು ಎಥಿಲೀನ್ ಗ್ಲೈಕೋಲ್ ರಾಸಾಯನಿಕ ಎಂದು WHO ಹೇಳಿದೆ.
ಈ ರಾಸಾಯನಿಕಗಳು ಮನುಷ್ಯರಿಗೆ ವಿಷಕಾರಿ ಆಗಿದ್ದು ಹೊಟ್ಟೆ ನೋವು, ವಾಂತಿ, ಅತಿಸಾರ, ಮೂತ್ರ ವಿಸರ್ಜನೆಗೆ ತೊಡಕು ತಲೆನೋವು, ಬದಲಾದ ಮಾನಸಿಕ ಸ್ಥಿತಿ ಮತ್ತು ತೀವ್ರವಾದ ಮೂತ್ರಪಿಂಡದ ಗಾಯವು ಸಾವಿಗೆ ಕಾರಣವಾಗಬಹುದು.

ಕೆಮ್ಮು ಸಿರಪ್‌ಗಳಲ್ಲಿ ಗ್ಲಿಸರಾಲ್ ಅನ್ನು ಸಿಹಿಗೊಳಿಸುವ ಮತ್ತು ದಪ್ಪವಾಗಿಸುವ ಏಜೆಂಟ್ ಆಗಿ ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ವೆಚ್ಚವನ್ನು ಉಳಿಸಲು DEG ಮತ್ತು ಎಥಿಲೀನ್ ಗ್ಲೈಕಾಲ್‌ನಂತಹ ಪರ್ಯಾಯಗಳಿಂದ ಬದಲಾಯಿಸಲಾಗುತ್ತದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
“ಇದು ಭಾರತ ಸೇರಿದಂತೆ ಈ ಹಿಂದೆ ಕೆಲವು ದೇಶಗಳಲ್ಲಿ ಸಾಮೂಹಿಕ ವಿಷಕ್ಕೆ ಕಾರಣವಾಗಿದೆ” ಎಂದು ಹರ್ಯಾಣ ಮೂಲದ ಜೆನೆರಿಕ್ ಔಷಧ ತಯಾರಕರ ಸಿಇಒ ಹೇಳಿದರು.

ಕಾಡುವ ನೆನಪುಗಳು

ಇತ್ತೀಚಿನ ಘಟನೆ ದೇಶದಲ್ಲಿ ಹಲವಾರು ಬಾರಿ ಸಂಭವಿಸಿದ ಡೈಎಥಿಲೀನ್ ಗ್ಲೈಕೋಲ್ ಸಂಬಂಧಿತ ಸಾವುಗಳನ್ನು ನೆನಪಿಸುತ್ತದೆ. ಡಿಸೆಂಬರ್ 2019 ಮತ್ತು ಜನವರಿ 2020 ರ ನಡುವೆ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ಕೋಲ್ಡ್‌ಬೆಸ್ಟ್-ಪಿಸಿ ಬ್ರಾಂಡ್ ಹೆಸರಿನಲ್ಲಿ ಮಾರಾಟವಾದ ಕೆಮ್ಮಿನ ಸಿರಪ್ ಸೇವಿಸಿ 12 ಮಕ್ಕಳು ಸಾವಿಗೀಡಾಗಿದ್ದರು. ಈ ಔಷಧದಿಂದಾಗಿ ಭಾರತದಲ್ಲಿ ಸಂಭವಿಸಿದ ನಾಲ್ಕನೇ ಸಾಮೂಹಿಕ ಗ್ಲೈಕೋಲ್ ವಿಷಕಾರಿ ಘಟನೆ ಇದಾಗಿತ್ತು. 1973 ರಲ್ಲಿ ಚೆನ್ನೈ ಆಸ್ಪತ್ರೆಯಲ್ಲಿ ನಡೆದ ಇದೇ ರೀತಿಯ ಘಟನೆ ನಡೆದಿದ್ದು 14 ಮಕ್ಕಳ ಸಾವಿಗೆ ಕಾರಣವಾದ ಮೊದಲ ಪ್ರಕರಣವಾಗಿದೆ.

1986 ರಲ್ಲಿ ಮುಂಬೈನ ಜೆ ಜೆ ಆಸ್ಪತ್ರೆಯಲ್ಲಿ ಇದೇ ರೀತಿಯ ವಿಷ 14 ರೋಗಿಗಳ ಸಾವಿಗೆ ಕಾರಣವಾಯಿತು. 1998 ರಲ್ಲಿ 33 ಮಕ್ಕಳು ನಕಲಿ ಔಷಧಗಳ ಸೇವನೆಯಿಂದಾಗಿ ದೆಹಲಿಯ ಎರಡು ಆಸ್ಪತ್ರೆಗಳಲ್ಲಿ ಸಾವಿಗೀಡಾದರು. ಈ ಕಾರಣಕ್ಕಾಗಿಯೇ ವೈದ್ಯರು, ಹೆಚ್ಚಿನ ಸಂದರ್ಭಗಳಲ್ಲಿ, ಜೆನೆರಿಕ್ ಔಷಧಿಗಳ ಗುಣಮಟ್ಟದ ಬಗ್ಗೆ ಖಚಿತವಾಗಿರದೆ ಶಿಫಾರಸು ಮಾಡುವ ಬಗ್ಗೆ ಎಚ್ಚರದಿಂದಿರುತ್ತಾರೆ ಎಂದು ವೈದ್ಯ ಮತ್ತು ವೈದ್ಯಕೀಯ ಸಂಶೋಧಕ ಡಾ.ರಾಜೀವ್ ಜಯದೇವನ್ ಹೇಳಿದ್ದಾರೆ .

TV9 Kannada


Leave a Reply

Your email address will not be published.