ತುಮಕೂರು: ಉದ್ಯಮಿಗಳು ವ್ಯಾಕ್ಸಿನ್ ಖರೀದಿಸುವಂತೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮನವಿ ಮಾಡಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ವ್ಯಾಕ್ಸಿನ್ ಖರೀದಿಸಿ ನಿಮ್ಮ ಕಾರ್ಮಿಕರಿಗೆ ನೀಡಿ ಅಂತ ಜಿಲ್ಲಾ ಕೈಗಾರಿಕಾ ಉದ್ಯಮಿಗಳಿಗೆ ಕೇಳಿಕೊಂಡರು. ವ್ಯಾಕ್ಸಿನ್ ಖರೀದಿಸಲು ಮುಂದೆ ಬಂದರೆ ಸೇವಾ ಶುಲ್ಕವಿಲ್ಲದೆ ನೀಡಲು ಸಿದ್ಧ‌ ಎಂದು ಹೇಳಿದ್ರು.

ಸದ್ಯ 20 ರಿಂದ 25 ಸಾವಿರ ವ್ಯಾಕ್ಸಿನ್ ಬರುತ್ತಿದೆ. ಈ ಪ್ರಮಾಣದಲ್ಲೇ ವ್ಯಾಕ್ಸಿನ್ ನೀಡಿದರೆ ಐದಾರು ತಿಂಗಳಾದ್ರೂ ಲಸಿಕೆ ವಿತರಣೆ ಮುಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶಕ್ತಿ ಇರುವವರು ವ್ಯಾಕ್ಸಿನ್ ಖರೀದಿಸಿ ಕಾರ್ಮಿಕರಿಗೆ ನೀಡಿ ಎಂದು ಮಾಧುಸ್ವಾಮಿ ವಿನಂತಿಸಿದ್ರು.

The post ಉದ್ಯಮಿಗಳು ಲಸಿಕೆ ಖರೀದಿಸಿ ನಿಮ್ಮ ಕಾರ್ಮಿಕರಿಗೆ ನೀಡಿ: ಮಾಧುಸ್ವಾಮಿ ಮನವಿ appeared first on News First Kannada.

Source: newsfirstlive.com

Source link