ಉನ್ನತ ಅಧಿಕಾರಿಗಳು ಹೈಕೋರ್ಟ್​ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲು ಸೂಚನೆ: ಸಿಜೆ ಎಚ್ಚರಿಕೆ | High Court Asks Senior Officers to Come to inquiry or to face disciplinary action


ಉನ್ನತ ಅಧಿಕಾರಿಗಳು ಹೈಕೋರ್ಟ್​ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲು ಸೂಚನೆ: ಸಿಜೆ ಎಚ್ಚರಿಕೆ

ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಹೈಕೋರ್ಟ್ (Karnataka High Court) ಸೂಚಿಸಿದರೂ ಅಧಿಕಾರಿಗಳು ವಿಚಾರಣೆಗೆ ಹಾಜರಾಗುತ್ತಿಲ್ಲ. ಇದೇ ಪ್ರವೃತ್ತಿ ಮುಂದುವರಿದರೆ ಬಂಧಿಸಿ ಕರೆತರುವಂತೆ ಡಿಜಿ ಐಜಿಪಿಗೆ ಸೂಚಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಗೈರು ಹಾಜರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೈಕೋರ್ಟ್ ಸೂಚಿಸಿದಾಗ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕು. ಸಚಿವ ಸಂಪುಟ ಸಭೆಯಿದ್ದರೂ ನ್ಯಾಯಾಲಯದ ಕಲಾಪ ತಪ್ಪಿಸಿಕೊಳ್ಳುವಂತಿಲ್ಲ. ಇಂಥ ಗೈರುಹಾಜರಿಯನ್ನು ನಾವು ಸಹಿಸುವುದಿಲ್ಲ. ವಿಚಾರಣೆಗೆ ಹಾಜರಾಗದ ಅಧಿಕಾರಿಗಳನ್ನು ಬಂಧಿಸಿ ಕರೆತರುವಂತೆ ಡಿಜಿ ಐಜಿಪಿಗೆ ಸೂಚಿಸುವ ಅಧಿಕಾರ ನಮಗಿದೆ. ಅಂಥ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಿ ಎಂದು ಪ್ರಭುಲಿಂಗ ನಾವದಗಿ ಅವರಿಗೆ ಹೈಕೋರ್ಟ್ ಸೂಚಿಸಿತು.

ಹೈಕೋರ್ಟ್‌ ಅನ್ನು ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಿದೆ. ನಾವು ಈ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸುತ್ತೇವೆ. ಸಂಬಳ ಬರದಂತೆ ತಡೆಹಿಡಿಯಲು ಸೂಚಿಸುತ್ತೇವೆ ಎಂದು ಕಟುವಾಗಿ ಎಚ್ಚರಿಸಿದರು. ರಾಜ್ಯ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಚಾರಣೆಗೆ ಗೈರು ಹಾಜರಾಗಿದ್ದರು. ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರೂ ಇವರು ಬಂದಿರಲಿಲ್ಲ. ಅಧಿಕಾರಿಗಳ ಈ ಪ್ರವೃತ್ತಿಯನ್ನು ನ್ಯಾಯಮೂರ್ತಿಗಳ ಕೋಪಕ್ಕೆ ಗುರಿಯಾಯಿತು.

ಮತ್ತೆ ಇಂತಹ ತಪ್ಪು ಮಾಡಬೇಡಿ. ನಿಮ್ಮ ವೃತ್ತಿಗೆ ಯಾವುದೇ ರೀತಿ ತೊಂದರೆ ತಂದುಕೊಳ್ಳಬೇಡಿ ಎಂದು ಹಾಜರಾಗಿದ್ದ ಅಧಿಕಾರಿಗಳಿಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಸಮೀರ್ ವಾಂಖೆಡೆಯ ಅಪ್ಪ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ನವಾಬ್ ಮಲಿಕ್ ಪ್ರತಿಕ್ರಿಯೆ ಕೋರಿದ ಬಾಂಬೆ ಹೈಕೋರ್ಟ್
ಇದನ್ನೂ ಓದಿ: ಡಿಮ್ಹಾನ್ಸ್‌ ಆಸ್ಪತ್ರೆಗೆ ಸೌಕರ್ಯ ಕಲ್ಪಿಸದ ಸರ್ಕಾರ: ಸಂಬಂಧಿಸಿದ ಅಧಿಕಾರಿಯನ್ನು ಜೈಲಿಗೆ ಕಳಿಸ್ತೇವೆ ಎಂದು ಗುಡುಗಿದ ಹೈಕೋರ್ಟ್

TV9 Kannada


Leave a Reply

Your email address will not be published. Required fields are marked *