ಬೆಂಗಳೂರು: ರಾಜ್ಯದಲ್ಲಿ ಎಲೆಕ್ಷನ್ ಕ್ಯಾಬಿನೆಟ್ ರಚನೆಯಾಗುವ ಬಗ್ಗೆ ಚರ್ಚೆಯಾಗ್ತಿದೆ. ಈ ವೇಳೆ ಉನ್ನತ ಹುದ್ದೆಗಾಗಿ ಸಚಿವ ಬಿ.ಶ್ರೀರಾಮುಲು ಕಸರತ್ತು ನಡೆಸಿದ್ದಾರೆ ಅಂತ ಹೇಳಲಾಗುತ್ತಿದೆ.

ಸಿಎಂ ಬಿಎಸ್​ವೈ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಂತೆ, ಇತ್ತ ಟೆಂಪಲ್ ರನ್ ಆರಂಭಿಸಿರುವ ಸಚಿವ ಬಿ. ಶ್ರೀರಾಮುಲು‌, ನಿನ್ನೆ ಕೇರಳದ ಶಬರಿ‌ಮಲೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಎಲೆಕ್ಷನ್ ಕ್ಯಾಬಿನೆಟ್‌ ರಚನೆಯಾದ್ರೆ ಡಿಸಿಎಂ ಹುದ್ದೆ ಮೇಲೆ ರಾಮುಲು ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ. ಅದರಂತೆ ತಮ್ಮ ಇಷ್ಟಾರ್ಥ ಈಡೇಕೆಗಾಗಿ ಶಬರಿಮಲೆಗೆ ಭೇಟಿ ನೀಡಿದ್ದಾರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಇನ್ನು ಶಬರಿಮಲೆ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ರಾಮುಲು.. ಶಬರಿಮಲೆಗೆ ಭೇಟಿ ನೀಡಿ, ನೀಲಾಕೆಲ್ ಬೇಸ್ ಕ್ಯಾಂಪ್ ನಲ್ಲಿ ಸಸಿ ನೆಟ್ಟು ನೀರುಣಿಸಲಾಯಿತು. ಕೇರಳ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಶ್ರೀ ಕೆ.ರಾಧಾಕೃಷ್ಣನ್, ಕೊನ್ನಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ ಯು ಜೆನಿಶ್ ಕುಮಾರ್, ಟ್ರಾವಂಗೋರ್ ದೇವಸ್ಥಾನದ ಬೋರ್ಡ್ ಅಧ್ಯಕ್ಷರಾದ ಶ್ರೀ ಎನ್‌ ವಾಸು ಉಪಸ್ಥಿತರಿದ್ದರು ಎಂದು ಮಾಹಿತಿ ನೀಡಿದ್ದಾರೆ.

 

ಇನ್ನು ಹೈಕಮಾಂಡ್​ ಬುಲಾವ್​ ಕೊಟ್ಟಿದ್ದ ಕಾರಣ ಸಿಎಂ ಬಿಎಸ್​ವೈ ದೆಹಲಿಗೆ ತೆರಳಿದ್ದಾರೆ. ನಿನ್ನೆ ಪ್ರಧಾನಿ ಮೋದಿ ಸೇರಿದಂತೆ ಹಲವರನ್ನ ಭೇಟಿಯಾಗಿದ್ದು, ಇವತ್ತೂ ಭೇಟಿ ಪರ್ವ ಮುಂದುವರಿಯಲಿದೆ. ಆದ್ರೆ ಯಡಿಯೂರಪ್ಪರ ದೆಹಲಿ ಟೂರ್ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಜನ್ಮ ನೀಡಿತ್ತು. ಸಂಪುಟ ಸರ್ಕಸ್​ ವಿಷಯವಾ ಅನ್ನೋ ಗೊಂದಲಗಳು ಉದ್ಭವಿಸಿದ್ವು. ಈ ನಡುವೆ ಎಲೆಕ್ಷನ್​ ಕ್ಯಾಬಿನೆಟ್​ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

 

The post ಉನ್ನತ ಹುದ್ದೆಗಾಗಿ ರಾಮಲು ಕಸರತ್ತು.. ಎಲೆಕ್ಷನ್ ಕ್ಯಾಬಿನೆಟ್ ವಿಚಾರ ಬೆನ್ನಲ್ಲೇ ಟೆಂಪಲ್​ ರನ್ appeared first on News First Kannada.

Source: newsfirstlive.com

Source link