ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯುಕ್ತಿಕ ಟ್ವಿಟರ್​ ಖಾತೆಯ ಬ್ಲೂಟಿಕ್ ಮಾರ್ಕ್ ​​ಅನ್ನು ಟ್ವಿಟರ್​​ ತೆಗೆದು ಹಾಕಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಟ್ವಿಟರ್​​ ಬ್ಲೂ ಟಿಕ್ ರೀಸ್ಟೋರ್ ಮಾಡಿದೆ.

ಸೆಲೆಬ್ರಿಟಿಗಳು, ಗಣ್ಯರು, ಕೆಲ ಪೇಜ್​ಗಳು ಹಾಗೂ ಸರ್ಕಾರಿ ಕಚೇರಿಗಳ ಖಾತೆ ಅಧಿಕೃತ ಎಂದು ಸೂಚಿಸಲು ಬ್ಲೂ ಟಿಕ್ ನೀಡಲಾಗುತ್ತದೆ. ಆದ್ರೆ ಕೆಲ ಆರ್​ಎಸ್​ಎಸ್​​ ನಾಯಕರ ಟ್ವಿಟರ್​ ಖಾತೆಗಳಿಗೆ ಇದ್ದ ಬ್ಲೂ ಟಿಕ್​ ಈಗ ಮಾಯವಾಗಿದೆ ಅಂತ ವರದಿಯಾಗಿದೆ. ಕೆಲ ಕಾಲ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದಲೂ ಕೂಡ ಬ್ಲೂ ಟಿಕ್ ತೆಗೆದುಹಾಕಲಾಗಿತ್ತು. ಆದರೆ ವೆಂಕಯ್ಯ ನಾಯ್ದು ಅವರ ಕಚೇರಿಯ ಅಧಿಕೃತ ಖಾತೆ @VPSecratariatಗೆ ಬ್ಲೂ ಟಿಕ್​ ಮಾರ್ಕ್​ ಮುಂದುವರಿದಿತ್ತು.

ಇತ್ತ ವೆಂಕಯ್ಯನಾಯ್ಡು ಅವರ ವೈಯುಕ್ತಿಕ ಖಾತೆಯ ಬ್ಲೂ ಟಿಕ್​ ಮಾರ್ಕ್​​ ತೆಗೆದ ಬಗ್ಗೆ ವರದಿಗಳು ಪ್ರಸಾರವಾಗುತ್ತಿದಂತೆ ಅವರ ಖಾತೆಗೆ ಮತ್ತೆ ಮಾರ್ಕ್​ ಅನ್ನು ವಾಪಸ್ ನೀಡಲಾಗಿದೆ. ಟ್ವಿಟರ್ ನಡೆಯ ಕುರಿತು ಅಸಮಾಧಾನ ಹೊರಹಾಕಿರೋ ಬಿಜೆಪಿ ನಾಯಕರು, ಖಾತೆಯನ್ನು ಪರಿಶೀಲಿಸದೆ ಬ್ಲೂ ಟಿಕ್ ತೆಗೆಯುವುದು ಎಷ್ಟು ಸರಿ? ಬಳಕೆದಾರರು ಸಕ್ರಿಯವಾಗಿಲ್ಲ ಎಂದರೆ ಪರಿಶೀಲಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ವೆಂಕಯ್ಯ ನಾಯ್ದು ಅವರ ವೈಯುಕ್ತಿಕ ಖಾತೆಗೆ 1.3 ಮಿಲಿಯನ್​ ಫಾಲೋವರ್ಸ್​​ ಇದ್ದಾರೆ. 2020 ಜುಲೈ 23ರಂದು ಅವರು ಕೊನೆ ಬಾರಿಗೆ ಟ್ವೀಟ್​ ಮಾಡಿದ್ದರು. ಇನ್ನು ಭಾರತದ ಉಪ ರಾಷ್ಟ್ರಪತಿಗಳ ಖಾತೆಗೆ 9,31,000 ಫಾಲೋವರ್ಸ್​​ ಇದ್ದಾರೆ.

The post ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾತೆಗೆ ಬ್ಲೂಟಿಕ್ ತೆಗೆದ ಟ್ವಿಟರ್, ಕೆಲವೇ ಹೊತ್ತಲ್ಲಿ ರೀಸ್ಟೋರ್ appeared first on News First Kannada.

Source: newsfirstlive.com

Source link