ಸ್ಯಾಂಡಲ್ವುಡ್ನ ಸೆಂಚ್ಯೂರಿ ಸ್ಟಾರ್ ಶಿವರಾಜಕುಮಾರ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದಾರೆ.
ಚೆನ್ನೈನ ರಾಜಭವನಕ್ಕೆ ಭೇಟಿ ನೀಡಿದ ಶಿವಣ್ಣ, ನಿನ್ನೆ ಮಧ್ಯಾಹ್ನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ, ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಇತ್ತೀಚಿಗೆ ಶಿವಣ್ಣ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನ ಕೂಡ ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಸದ್ಯ ‘ವೇದಂ’ ಚಿತ್ರದ ಶುಟಿಂಗ್ನಲ್ಲಿ ಬ್ಯೂಸಿ ಆಗಿರುವ ಶಿವಣ್ಣ ಇತ್ತೀಚಿಗೆ ಮೈಸೂರಲ್ಲಿ ಬೀಡು ಬಿಟ್ಟು ಶೂಟಿಂಗ್ನಲ್ಲಿ ಭಾಗಿಯಾಗಿದ್ದರು.