‘ಉಪಾಧ್ಯಕ್ಷ’ ಚಿತ್ರದಿಂದ ಹೀರೋ ಆದ ಚಿಕ್ಕಣ್ಣ; ಈವರೆಗಿನ ಸಿನಿಜರ್ನಿ ಮೆಲುಕು ಹಾಕಿದ ಹಾಸ್ಯನಟ | Sandalwood Comedy actor Chikkanna talks about his new movie UpadhyakshaUpadhyaksha Movie: ಇಷ್ಟು ದಿನ ಹೀರೋ ಸ್ನೇಹಿತನಾಗಿ ನಟಿಸುತ್ತಿದ್ದ ಚಿಕ್ಕಣ್ಣ ಈಗ ತಾವೇ ಹೀರೋ ಪಟ್ಟಕ್ಕೆ ಏರಿದ್ದಾರೆ. ಅವರ ಹೊಸ ಚಿತ್ರ ‘ಉಪಾಧ್ಯಕ್ಷ’ ಸೆಟ್ಟೇರಿದೆ.

TV9kannada Web Team


| Edited By: Madan Kumar

Jun 16, 2022 | 1:37 PM
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಖ್ಯಾತಿ ಪಡೆದಿರುವ ಚಿಕ್ಕಣ್ಣ (Chikkanna) ಅವರು ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ಹೀರೋ ಆಗಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾ (Upadhyaksha Movie) ಮೂಲಕ ಅವರು ನಾಯಕನ ಪಟ್ಟ ಅಲಂಕರಿಸುತ್ತಿದ್ದಾರೆ. ಈ ಚಿತ್ರಕ್ಕೆ ಇಂದು (ಜೂನ್​ 16) ಮುಹೂರ್ತ ನೆರವೇರಿದೆ. ಈ ಖುಷಿಯ ಸಂದರ್ಭದಲ್ಲಿ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮ ಸಿನಿಮಾ ಜರ್ನಿ ಯಾವ ರೀತಿ ಸಾಗಿಬಂತು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ. ಉಮಾಪತಿ ಶ್ರೀನಿವಾಸ್​ ಗೌಡ ಅವರ ಬ್ಯಾನರ್​ ಮೂಲಕ ‘ಉಪಾಧ್ಯಕ್ಷ’ ಚಿತ್ರ ನಿರ್ಮಾಣ ಆಗುತ್ತಿದೆ. ಒಮ್ಮೆ ಹೀರೋ ಆದ ಬಳಿಕ ಸ್ಯಾಂಡಲ್​ವುಡ್​ನಲ್ಲಿ (Sandalwood) ಚಿಕ್ಕಣ್ಣ ಅವರು ಹೀರೋ ಆಗಿಯೇ ಮುಂದುವರಿಯುತ್ತಾರಾ? ಬೇರೆ ಪಾತ್ರಗಳನ್ನೂ ಒಪ್ಪಿಕೊಳ್ಳುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿದೆ ಉತ್ತರ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.