ರಿಯಲ್​ ಸ್ಟಾರ್​ ಉಪೇಂದ್ರ ಸಹೋದರ ಸುಧೀಂದ್ರ ಹಾಗೂ ಅತ್ತಿಗೆ ವೀಣಾಗೆ ಇಂದು ಮದುವೆ ವಾರ್ಷಿಕೋತ್ಸವದ ಸಂಭ್ರಮ. ಇಂದಿಗೆ ಇಬ್ಬರು ಮದುವೆಯಾಗಿ 26 ವರ್ಷಗಳು ಸಂದಿವೆ. ಈ ದಿನವನ್ನ ನೆನಪಿನಲ್ಲಿಟ್ಟುಕೊಳ್ಳುವಂತೆ ಸುಧೀಂದ್ರ ಹಾಗೂ ವೀಣಾ ದಂಪತಿ ಆಟೋ ಚಾಲಕರಿಗಾಗಿ ಮೂರು ಲಕ್ಷ ರೂಪಾಯಿ ಮೀಸಲಿಟ್ಟಿದ್ದಾರೆ.

ಹೌದು.. ಸದ್ಯ ಕೊರೊನಾ ಪರಿಸ್ಥಿತಿಯಲ್ಲಿ ನಟ ಉಪೇಂದ್ರ ಕಲಾವಿದರಿಗೆ, ಬಡವರಿಗೆ ಹಾಗೂ ರೈತರಿಗೆ ನೆರವಾಗ್ತಿದ್ದಾರೆ. ಇತ್ತ ಸಹೋದರ ಸುಧೀಂದ್ರ ಆಟೋ ಚಾಲಕರಿಗೆ ದಿನಸಿ ಕಿಟ್​ಗಳನ್ನ ನೀಡುವ ಸಲುವಾಗಿ ಈ ದಿನ ಮೂರು ಲಕ್ಷ ರೂಪಾಯಿಗಳನ್ನ ಉಪೇಂದ್ರರ ಕೈಗೆ ನೀಡಿದ್ದಾರೆ.

ಈ ಬಗ್ಗೆ ನಟ ಉಪೇಂದ್ರ ಬಹಳ ಖುಷಿ ಹಾಗೂ ಹೆಮ್ಮೆಯಿಂದಲೇ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದು, ‘ಅಣ್ಣ ಸುಧೀಂದ್ರ ಮತ್ತ ಅತ್ತಿಗೆ ವೀಣಾ ಅವರ 26 ನೇ ಮದುವೆ ವಾರ್ಷಿಕೋತ್ಸವ ಸಲುವಾಗಿ ಮೂರು ಲಕ್ಷ ರೂಗಳನ್ನು ಆಟೋ ಚಾಲಕರಿಗೆ ಕಿಟ್ ವಿತರಿಸಲು ನೀಡಿದ್ದಾರೆ.

ಧನ್ಯವಾದಗಳು’ ಅಂತ ಬರೆದು ಟ್ವೀಟ್​ ಮಾಡಿದ್ದಾರೆ. ಅಂದ್ಹಾಗೇ, ಸುಧೀಂದ್ರ ಹಾಗೂ ವೀಣಾ ದಂಪತಿಯ ಮಗನೇ ಯಂಗ್​ ರಿಯಲ್​ ಸ್ಟಾರ್​ ನಿರಂಜನ್​ ಸುಧೀಂದ್ರ. ಸದ್ಯ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸ್ತಿದ್ದು, ‘ಸೂಪರ್​ ಸ್ಟಾರ್’​ ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

The post ಉಪೇಂದ್ರ ಅಣ್ಣನ ವಿವಾಹ ವಾರ್ಷಿಕೋತ್ಸವ; ಆಟೋ ಚಾಲಕರ ನೆರವಿಗೆ 3 ಲಕ್ಷ ದೇಣಿಗೆ appeared first on News First Kannada.

Source: newsfirstlive.com

Source link