ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಉಪೇಂದ್ರ ಬಾಕ್ಸರ್ ಆಗಿ ಕಾಣಿಸಿಕೊಂಡಿರುವ ತೆಲುಗಿನ ಬಹು ನಿರೀಕ್ಷಿತ ‘ಗಣಿ’. ಸಿನಿಮಾ ಮತ್ತೇ ತನ್ನ ರಿಲೀಸ್ ದಿನಾಂಕವನ್ನ ಮುಂದೂಡಿದೆ.
ಈ ಸಿನಿಮಾವನ್ನು ಇದೇ ಡಿಸೆಂಬರ್ನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಪ್ಲಾನ್ ಮಾಡಿತ್ತು, ಡಿಸೆಂಬರ್ನಲ್ಲಿ ಅಲ್ಲು ಅರ್ಜುನ್ ನಟನೆಯು ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ರಿಲೀಸ್ ಆಗುತ್ತಿರುವುದರಿಂದ ‘ಗಣಿ’ ಸಿನಿಮಾವನ್ನು ಜನವರಿಗೆ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧಾರ ಮಾಡಿತ್ತು.
Punching hard 🥊 My Muscle Man @IAmVarunTej 🧨💃♥️💪🏼 #GhaniTeaser #Ghani 🥁🥁🥁🥁🥁 pic.twitter.com/28OV5Dj2O1
— thaman S (@MusicThaman) November 15, 2021
ಆದರೆ ಮತ್ತೆ ‘ಗಣಿ’ಗೆ ‘ಶ್ಯಾಮ್ ಸಿಂಗ್ ರಾಯ್’ ಆಡ್ಡ ಬಂದಿದ್ದಾನೆ. ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಶ್ಯಾಮ್ಸಿಂಗ್ ರಾಯ್ ಸಿನಿಮಾ ಜನವರಿಗೆ ಬರಲು ಸಿದ್ಧವಾಗಿದೆ. ಈ ಕಾರಣದಿಂದ ಗಣಿಗೆ ಬಿಡುಗಡೆ ಭಾಗ್ಯ ಸಿಗದೆ, ಮತ್ತೆ ಮಾರ್ಚ್ ಗೆ ಹೋಗಿದ್ದಾನೆ. ಗಣಿ ಸಿನಿಮಾದಲ್ಲಿ ಉಪೇಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ವರುಣ್ ತೇಜ್ ಮೂಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಕಿರಣ್ ಕೊರಪ್ಪಾಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ.