ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ನೀವೂ ನಟಿಸಬಹುದು; ‘ರಿಯಲ್​ ಸ್ಟಾರ್​’ ನೀಡಿದ ಸೂಪರ್​ ಅವಕಾಶ | Upendra will give acting chance to new talents in his next directorial movie


ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ನೀವೂ ನಟಿಸಬಹುದು; ‘ರಿಯಲ್​ ಸ್ಟಾರ್​’ ನೀಡಿದ ಸೂಪರ್​ ಅವಕಾಶ

ಉಪೇಂದ್ರ

‘ರಿಯಲ್​ ಸ್ಟಾರ್​’ ಉಪೇಂದ್ರ (Real Star Upendra) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನಟನಾಗಿ, ನಿರ್ದೇಶಕನಾಗಿ ಅವರು ಮಾಡಿದ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ನಟನೆಗಿಂತಲೂ ನಿರ್ದೇಶನವೇ ಜನರಿಗೆ ಹೆಚ್ಚು ಇಷ್ಟ ಎಂದರೆ ತಪ್ಪಿಲ್ಲ. ‘ಶ್​’, ‘ಓಂ’, ‘ಎ’, ‘ಉಪೇಂದ್ರ’ ಮುಂತಾದ ಸೂಪರ್​ ಹಿಟ್ (Upendra Direction Movies)​ ಸಿನಿಮಾಗಳನ್ನು ನೀಡಿದ ಖ್ಯಾತ ಉಪ್ಪಿಗೆ ಸಲ್ಲುತ್ತದೆ. ಅವರ ಸಿನಿಮಾದಲ್ಲಿ ಒಮ್ಮೆಯಾದರೂ ನಟಿಸಬೇಕು ಎಂಬ ಆಸೆ ಎಲ್ಲ ಕಲಾವಿದರಿಗೂ ಇರುತ್ತದೆ. ಅಂಥವರ ಆಸೆ ಈಡೇರುವ ಕಾಲ ಈಗ ಬಂದಿದೆ. ಎಲ್ಲರಿಗೂ ಉಪೇಂದ್ರ ಒಂದು ಬಂಪರ್​ ಚಾನ್ಸ್​ ನೀಡುತ್ತಿದ್ದಾರೆ. ತಾವು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರಿಗೆ ಉಪ್ಪಿ ಅವಕಾಶ (Upendra Audition) ನೀಡುತ್ತಿದ್ದಾರೆ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಈ ನ್ಯೂಸ್​ ಕೇಳಿ ಆಸಕ್ತರು​ ಥ್ರಿಲ್​ ಆಗಿದ್ದಾರೆ. ಉಪೇಂದ್ರ ನಿರ್ದೇಶನದ ಸಿನಿಮಾದಲ್ಲಿ ನಟನೆಯ ಚಾನ್ಸ್​ ಪಡೆಯಲು ಏನು ಮಾಡಬೇಕು? ಎಷ್ಟು ದಿನದೊಳಗೆ ಪ್ರಯತ್ನಿಸಬೇಕು? ವಯಸ್ಸಿನ ಮಿತಿ ಏನು? ಈ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ..

ಹಲವು ವರ್ಷಗಳ ಗ್ಯಾಪ್​ ಬಳಿಕ ಉಪೇಂದ್ರ ಮತ್ತೆ ನಿರ್ದೇಶಕನ ಕ್ಯಾಪ್​ ಧರಿಸುತ್ತಾರೆ ಎಂಬ ಮಾತು ಕೆಲವು ದಿನಗಳಿಂದ ಕೇಳಿಬರುತ್ತಿದೆ. ಉಪ್ಪಿ ಹೊಸ ಚಿತ್ರದ ಡೈರೆಕ್ಷನ್​ಗೆ ತಯಾರಿ ಮಾಡಿಕೊಳ್ಳುತ್ತಿರುವುದು ಕೂಡ ನಿಜ. ಆ ಬಗ್ಗೆ ಸ್ವತಃ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಸಿನಿಮಾದಲ್ಲಿ ನಟಿಸಲು ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆ ಮೂಲಕವೇ ಅವರು ಆಡಿಷನ್​ ಬಗ್ಗೆ ವಿವರ ಹಂಚಿಕೊಂಡಿದ್ದಾರೆ.

‘ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲು ನಟ-ನಟಿಯರು ಬೇಕಾಗಿದ್ದಾರೆ. 14ರಿಂದ 60 ವರ್ಷ ವಯಸ್ಸಿನವರು ಕಲಾವಿದರು ತಾವು ನಟಿಸಿರುವ 2 ನಿಮಿಷದೊಳಗಿನ ವಿಡಿಯೋ ತುಣುಕನ್ನು [email protected] ಮೇಲ್​ ಐಡಿಗೆ ಕಳಿಸಿಕೊಡಿ. ಕೊನೆಯ ದಿನಾಂಕ 10 ಮಾರ್ಚ್​ 2022’ ಎಂದು ಉಪೇಂದ್ರ ಪೋಸ್ಟ್​ ಮಾಡಿದ್ದಾರೆ.

ಅಭಿಮಾನಿಗಳಿಗೆ ಉಪೇಂದ್ರ ಎಂದರೆ ಎಲ್ಲಿಲ್ಲದ ಕ್ರೇಜ್​. ಅದರಲ್ಲೂ ಅವರ ನಿರ್ದೇಶನದ ಸಿನಿಮಾ ಬಗ್ಗೆ ಜನರು ಸಖತ್​ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಉಪೇಂದ್ರ ಹೆಚ್ಚು ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಲಿ ಎಂಬುದು ಅಭಿಮಾನಿಗಳ ಬಯಕೆ. ಈ ನಡುವೆ ಉಪೇಂದ್ರ ಅವರು ಪ್ರಜಾಕೀಯದ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ವಿಶೇಷ ರೀತಿಯಲ್ಲಿ ರಾಜಕಾರಣಕ್ಕೆ ಅವರು ಎಂಟ್ರಿ ನೀಡಿದ್ದಾರೆ. ನಟನಾಗಿಯೂ ಉಪೇಂದ್ರ ಬ್ಯುಸಿ ಆಗಿದ್ದಾರೆ. ಅವರ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಕಬ್ಜ’ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇದೆ. ಆರ್​. ಚಂದ್ರು ನಿರ್ದೇಶನ ಮಾಡುತ್ತಿರುವ ಆ ಸಿನಿಮಾ ಅದ್ದೂರಿಯಾಗಿ ಮೂಡಿಬರುತ್ತಿದೆ. ಕೊವಿಡ್​ ಕಾರಣದಿಂದ ‘ಕಬ್ಜ’ ಚಿತ್ರದ ಕೆಲಸಗಳು ತಡವಾಗಿವೆ. ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ಡಿಫರೆಂಟ್​ ಗೆಟಪ್​ ಇದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ಗಳನ್ನು ಕಂಡು ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

TV9 Kannada


Leave a Reply

Your email address will not be published.