ಬೆಂಗಳೂರು: ನಟ ಉಪೇಂದ್ರ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಸದ್ಯ ದೇಶದಲ್ಲಿ ಹೆಚ್ಚಾಗಿರುವ ಕೊರೊನಾ ಸೋಂಕಿನ ಕುರಿತು ಹಾಗೂ ಅದನ್ನು ನಿಯಂತ್ರಿಸಲು ವಿಫ‌ಲವಾಗಿರುವ ಸರ್ಕಾರಗಳ ಕುರಿತು ಮಾತನಾಡಿದ್ದಾರೆ. ಉಪೇಂದ್ರ ಹೇಳುವಂತೆ, ಇವತ್ತಿನ ಈ ಸ್ಥಿತಿಗೆ ಕಾರಣ ಎಲ್ಲವನ್ನು ಬಿಝಿನೆಸ್‌ ದೃಷ್ಟಿಯಿಂದ ನೋಡುವ ಮನಸ್ಥಿತಿ. ಅದರಲ್ಲೂ ರಾಜಕಾರಣಿಗಳ ಬಿಝಿನೆಸ್‌ ಮೈಂಡ್‌ ಸೆಟ್‌ ಎನ್ನುವುದು ಉಪೇಂದ್ರ ಮಾತು.

ಸೋಮವಾರ ನಡೆದ “ಲಗಾಮ್‌’ ಚಿತ್ರದ ಮುಹೂರ್ತದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ, “ಮೊದಲು ನಾವು ಆರೋಗ್ಯ ಕ್ಷೇತ್ರ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿತ್ತು. ಯಾವತ್ತೂ ಕ್ಷಣ-ಆರೋಗ್ಯ ಚೆನ್ನಾಗಿರುವ ದೇಶ ಅದ್ಭುತವಾಗಿರುತ್ತದೆ. ಆದರೆ, ಅದರ ಬದಲಿಗೆ ನಾವು ಇತರ ವಿಚಾರಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇವೆ.

ದೇಶ ಬೇರೆ ನಾವು ಬೇರೆ ಎಂದು ಯೋಚಿಸುವ ಮನಸ್ಥಿತಿಯಿಂದ ಇವತ್ತು ಈ ಸಮಸ್ಯೆ ತಲೆದೋ ರಿದೆ. ರಾಜಕಾರಣಿಗಳು ಸಾವಿರಾರು ಜನರನ್ನು ಸೇರಿಸಿ ಸಭೆ ಮಾಡುತ್ತಾರೆ, ಮತ್ತೂಂದು ಕಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎನ್ನುತ್ತಾರೆ. ಇದರಿಂದ ಜನ ಕನ್‌ ಫ್ಯೂಶನ್‌ ಆಗುತ್ತಾರೆ. ಜನ ಉದ್ಧಾರ ಆಗಬೇಕು ಎಂದರೆ ಅವರು ವಿಚಾರವಂತರಾಗ ಬೇಕು.

ನಾವು ಎಲೆಕ್ಷನ್‌ ಸಮಯದಲ್ಲಿ ತಪ್ಪು ಮಾಡಿಕೊಂಡು ಆ ನಂತರ ವರ್ಷಪೂರ್ತಿ ಪ್ರತಿಭಟನೆ ಮಾಡಿ ಕೊಂಡಿದ್ದರೆ ಅದರಿಂದ ಪ್ರಯೋಜನವೇನು’ ಎಂದು ಪ್ರಶ್ನಿಸಿರುವ ಉಪೇಂದ್ರ, “ಜನ ಧೈರ್ಯವಾಗಿ ಈ ಪರಿ ಸ್ಥಿತಿಯನ್ನು ಎದುರಿಸಬೇಕು’ ಎಂದಿದ್ದಾರೆ. “ಖಾಯಿಲೆ ಮೊದಲು ಮನಸ್ಸಿಗೆ ಬರುತ್ತದೆ. ಆ ನಂತರ ದೇಹಕ್ಕೆ. ಹಾಗಾಗಿ, ಧೈರ್ಯದಿಂದ ಎದುರಿಸಬೇಕಾಗಿದೆ’ ಎನ್ನುವುದು ಉಪ್ಪಿ ಮಾತು.

ಸಿನೆಮಾ – Udayavani – ಉದಯವಾಣಿ
Read More