ರಾಜ್ಯದಲ್ಲಿ ಲಾಕ್​ಡೌನ್​ ಹೇರಲಾದ ದಿನದಿಂದಲೂ ನಟ ಉಪೇಂದ್ರ ಬಡವರು, ಕಷ್ಟದಲ್ಲಿರುವವರು, ಚಿತ್ರರಂಗದ ಕಲಾವಿದರು ಹಾಗೂ ರೈತರ ನೆರವಿಗೆ ನಿಂತಿದ್ದಾರೆ. ರೈತರಿಂದ ಬೆಳೆಗಳನ್ನ ಖರೀದಿಸಿ ಅದನ್ನ ಅಗತ್ಯವಿರುವ ಮನೆಗಳಿಗೆ ತಲುಪಿಸುತ್ತಿದ್ದಾರೆ. ಈಗಾಗಲೇ ಅದೆಷ್ಟೋ ಜನರ ಮನೆಗಳಿಗೆ ಹಿರಿಯ ಕಲಾವಿದರ ಮನೆಗಳಿಗೆ ರೇಷನ್​ ಕಿಟ್​ಗಳನ್ನ ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದೀಗ ಮತ್ತೆ ರೈತರು ಬೆಳೆದಿರುವ ತರಕಾರಿಗಳನ್ನ, ಕೊಡುಗೆಯಾಗಿ ಬಂದಿರುವ ಹೆಲ್ತ್​​ ಮಿಕ್ಸ್​ ಪೌಡರ್​ ಹಾಗೂ ಅಕ್ಕಿ, ಗೋಧಿ ತುಂಬಿರುವ ಚೀಲಗಳನ್ನ ಹಿರಿಯ ಕಲಾವಿದರಿಗೆ ಕಳುಹಿಸಿಕೊಡ್ತಿದ್ದಾರೆ. ಇಂದು ಮತ್ತು ನಾಳೆ ಈ ಕಾರ್ಯ ನಡೆಯಲಿದ್ದು, ಉಪ್ಪಿಯ ನಿಸ್ವಾರ್ಥ ಸೇವೆಗೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ. ಉಪ್ಪಿಯ ಸೇವೆ ನೋಡಿದ ಅದೆಷ್ಟೋ ಜನ ರೈತರು, ದುಡ್ಡು ತೆಗೆದುಕೊಳ್ಳದೇ ತಾವು ಬೆಳೆದ ಹಣ್ಣು- ತರಕಾರಿಗಳನ್ನ ಉಪೇಂದ್ರ ಕೈಗೆ ತಂದೊಪ್ಪಿಸುತ್ತಿದ್ದಾರೆ.

ಈ ಬಗ್ಗೆ ನಟ ಉಪೇಂದ್ರ ಟ್ವೀಟ್​ ಮಾಡಿದ್ದು ‘ಎಲ್ಲ ಹಿರಿಯ ಕಲಾವಿದರಿಗೆ 25 kg ಅಕ್ಕಿ ಬ್ಯಾಗ್, ಗೋಧಿ ಬ್ಯಾಗ್, ಎಣ್ಣೆ, ರೈತ ಬಾಂಧವರು ಕೊಟ್ಟ ತರಕಾರಿ, ಹಣ್ಣು ಮತ್ತು jeeni millet health mix powder ರವರು ಕೊಡುಗೆ ಕೊಟ್ಟ ಬಾಕ್ಸ್​​ಗಳನ್ನು ಇಂದು ಮತ್ತು ನಾಳೆ ತಲುಪಿಸುತ್ತಿದ್ದೇವೆ’ ಅಂತ ತಿಳಿಸಿದ್ದಾರೆ.

The post ಉಪ್ಪಿಯ ನಿಸ್ವಾರ್ಥ ಸೇವೆ; ಮತ್ತೆ ಹಿರಿಯ ಕಲಾವಿದರ ಮನೆಗೆ ದಿನಸಿ ಕಿಟ್​​ಗಳು appeared first on News First Kannada.

Source: newsfirstlive.com

Source link