ಕೆಲ ದಿನಗಳ ಹಿಂದೆ ಚಿತ್ರರಂಗದ ಕಲಾವಿದರ ಒಕ್ಕೂಟ್ಟಕ್ಕೆ ರಿಯಲ್ ಸ್ಟಾರ್ ಉಪೇಂದ್ರ 3000 ದಿನಸಿ ಕಿಟ್ ನೀಡಲು ಮುಂದಾದ್ರು. ಉಪ್ಪಿಯ ಈ ಉಪಕಾರವನ್ನ ಅರಿತ ಸ್ಯಾಂಡಲ್​ವುಡ್​ನ ಅನೇಕ ಕಲಾವಿದರು, ತಂತ್ರಜ್ಞರೂ ಸೇರಿದಂತೆ ಸಾರ್ವಜನಿಕರು ಕೂಡ ಉಪ್ಪಿ ಫೌಂಡೇಷನ್​​​​ಗೆ ದೇಣಿಕೆಗೆ ನೀಡಲು ಮುಂದಾದ್ರು.

ಸಿನಿಮಾ ಕಾರ್ಮಿಕರಿಗೆ ದಿನಸಿ ಕಿಟ್​​​​ ಹಂಚೋಕೆ ಅಂತಲೇ ಶುರು ಮಾಡಿದ ಕಾರ್ಯಕ್ರಮ ಈಗ ದೊಡ್ಡ ಮಟ್ಟ ಪ್ರಮಾಣದಲ್ಲಿ ಸಾಗುತ್ತಿದೆ. ದಿನಸಿ ಪದಾರ್ಥಗಳನ್ನ ಅಭಿಮಾನಿಗಳು, ಸಮಾಜದ ಗಣ್ಯರು ಉಪೇಂದ್ರ ಅವರ ಮನೆಗೆ ತಂದು ನೀಡುತ್ತಿದ್ದಾರೆ. ಚಿಕ್ಕವರಿಂದ ದೊಡ್ಡವರ ತನಕ ಉಪೇಂದ್ರ ಅವರ ದಿನಸಿ ಕಿಟ್ ಹಂಚೋ ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಬಡವರಿಗೆ, ಆಟೋ ಡ್ರೈವರ್ಸ್​​ಗಳಿಗೆ ಕೂಲಿಕಾರ್ಮಿಕರಿಗೆ ದಿನಸಿ ಕಿಟ್ ಹಂಚೋ ಯೋಜನೆಯಲ್ಲಿ ಉಪೇಂದ್ರ ಸ್ನೇಹ ಬಳಗವಿದೆ. ಕಲಾವಿದರ ಒಕ್ಕೂಟದ ಸಿನಿಮಾ ಕಾರ್ಮಿಕರಿಗೆಂದು ದಿನಸಿ ಹಂಚವ ಕಾರ್ಯಕ್ರಮವನ್ನ ಶುರು ಮಾಡಿದ್ದ ಉಪ್ಪಿಗೆ ಈಗ ಸಾರ್ವಜನಿಕರಿಗೂ ದಿನಸಿ ಹಂಚುವಷ್ಟು ದೇಣಿಗಳು ಹರಿದು ಬರ್ತಿವೆ.

The post ಉಪ್ಪಿ ಉಪಕಾರದ ನೆರವಿಗೆ ಸಾರ್ವಜನಿಕರಿಂದಲೂ ಹರಿದು ಬರ್ತಿದೆ ದಿನಸಿ ಕಿಟ್ appeared first on News First Kannada.

Source: newsfirstlive.com

Source link