“ಲಗಾಮ್‌’ ಎಂಬ ಸಿನಿಮಾದಲ್ಲಿ ಉಪೇಂದ್ರ ನಾಯಕರಾಗಿ ನಟಿಸುತ್ತಾರೆಂಬ ಸುದ್ದಿಯನ್ನು ನೀವು ಕೇಳಿರುತ್ತೀರಿ. ಈಗ ಆ ಚಿತ್ರದ ಮುಹೂರ್ತದ ಸಮಯ. ಹೌದು, “ಲಗಾಮ್‌ ’ ಚಿತ್ರಕ್ಕೆ ಇಂದು ಮುಹೂರ್ತ ನಡೆಯುತ್ತಿದೆ.

ಈ ಚಿತ್ರವನ್ನು ಕೆ.ಮಾದೇಶ ನಿರ್ದೇಶಿಸುತ್ತಿದ್ದು, ಎಂ.ಆರ್‌.ಗೌಡ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ದೊಡ್ಡ ಗ್ಯಾಪ್‌ನ ನಂತರ ನಿರ್ದೇಶಕ ಮಾದೇಶ ನಿರ್ದೇಶಿಸುತ್ತಿರುವ ಸಿನಿಮಾವಿದು.

ಸದ್ಯ ಉಪೇಂದ್ರ “ಕಬj’ ಸಿನಿಮಾದ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಆರ್.ಚಂದ್ರು ನಿರ್ಮಾಣ, ನಿರ್ದೇಶನದ “ಕಬ್ಜ’ ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಅದ್ಧೂರಿ ಮೇಕಿಂಗ್‌ ಮೂಲಕ ಚಿತ್ರ ಗಮನ ಸೆಳೆಯುತ್ತಿದೆ. ಈ ನಡುವೆಯೇ ಉಪೇಂದ್ರ ಅವರು ತೆಲುಗು ಚಿತ್ರವೊಂದರಲ್ಲೂ ನಟಿಸುತ್ತಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More