ಬೆಂಗಳೂರು: ನಟ ಉಪೇಂದ್ರರಿಂದ ಸ್ಫೂರ್ತಿ ಪಡೆದ ಅವರ ಅಭಿಮಾನಿಗಳು ಸಹ ಕೊರೊನಾ ವಿರುದ್ಧದ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ಅಖಿಲ ಕರ್ನಾಟಕ ಸೂಪರ್ ಸ್ಟಾರ್ ಉಪೇಂದ್ರ ಫ್ಯಾನ್ಸ್ ಕ್ಲಬ್ 100 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದೆ.

ಲಾಕ್​​ಡೌನ್​ನಿಂದ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಉಪೇಂದ್ರ ಅಭಿಮಾನಿಗಳು ಮಾನವೀಯತೆ ಮೆರೆಯುತ್ತಿದ್ದಾರೆ. ಲಾಕ್​​ಡೌನ್ ಆರಂಭವಾಗಿದ್ದರಿಂದ ಉಪೇಂದ್ರ ಅವರು ಸಿನಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ದಿನಸಿ ಕಿಟ್ ವಿತರಿಸುತ್ತಿರುವುದರ ಜೊತೆಗೆ ತಮ್ಮ ಕೈಲಾದ ಸಹಾಯವನ್ನ ಮಾಡಿಕೊಂಡು ಬರುತ್ತಿದ್ದಾರೆ.

ಉಪ್ಪಿಯ ನಿಸ್ವಾರ್ಥ ಸೇವೆಯನ್ನ ನೋಡಿದ ಅಭಿಮಾನಿಗಳು, ಇದೀಗ ತಮ್ಮ ಹೀರೋ ಆದರ್ಶವನ್ನೇ ಪಾಲಿಸುತ್ತಿದ್ದಾರೆ.

The post ಉಪ್ಪಿ ಹಾದಿಯನ್ನೇ ತುಳಿದ ಫ್ಯಾನ್ಸ್; ಸಂಕಷ್ಟದಲ್ಲಿರೋರಿಗೆ ದಿನಸಿ ಕಿಟ್ ವಿತರಣೆ appeared first on News First Kannada.

Source: newsfirstlive.com

Source link