ಹೊಸ ಚಿತ್ರ ‘ಯುಐ’ ಸಿನಿಮಾದ ಮುಹೂರ್ತ ಇಂದು (ಜೂನ್ 3) ನೆರವೇರಿದೆ. ಉಪೇಂದ್ರ ಅವರು ಭಿನ್ನ ಅವತಾರದಲ್ಲಿ ಮುಹೂರ್ತಕ್ಕೆ ಬಂದಿದ್ದರು. ಕಿಚ್ಚ ಸುದೀಪ್, ಶಿವರಾಜ್ಕುಮಾರ್, ಡಾಲಿ ಧನಂಜಯ, ವಸಿಷ್ಠ ಸಿಂಹ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
‘ರಿಯಲ್ ಸ್ಟಾರ್’ ಉಪೇಂದ್ರ ಅವರು (Upendra) ಇತ್ತೀಚೆಗೆ ನಟನೆ ಜತೆಗೆ ರಾಜಕೀಯ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಅವರು ನಿರ್ದೇಶನಕ್ಕೆ ಮರಳಬೇಕು ಎಂಬುದು ಅಭಿಮಾನಿಗಳ ಬೇಡಿಕೆ ಆಗಿತ್ತು. ಅಂತೆಯೇ ಅವರು ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ಹೊಸ ಚಿತ್ರ ‘ಯುಐ’ ಸಿನಿಮಾದ ಮುಹೂರ್ತ ಇಂದು (ಜೂನ್ 3) ನೆರವೇರಿದೆ. ಉಪೇಂದ್ರ ಅವರು ಭಿನ್ನ ಅವತಾರದಲ್ಲಿ ಮುಹೂರ್ತಕ್ಕೆ ಬಂದಿದ್ದರು. ಕಿಚ್ಚ ಸುದೀಪ್ (Sudeep), ಶಿವರಾಜ್ಕುಮಾರ್, ಡಾಲಿ ಧನಂಜಯ, ವಸಿಷ್ಠ ಸಿಂಹ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಸುದೀಪ್ ಅವರು ಉಪೇಂದ್ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ನಾನು ಉಪ್ಪಿ ಅವರ ಅಭಿಮಾನಿ ಆಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.