ಬೆಂಗಳೂರು: ನಟ ದರ್ಶನ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿಂತೆ ದರ್ಶನ್ ಫಾರ್ಮ್​ ಹೌಸ್​ಗೆ ಆರೋಪಿ ಅರುಣಾ ಕುಮಾರಿ ಭೇಟಿ ನೀಡಿದ್ದ ವಿಡಿಯೋ ಇದೀಗ ಲಭ್ಯವಾಗಿದೆ. ಆರೋಪಿ ಅರುಣಾ ಕುಮಾರಿ ಜೊತೆಗೆ ಮತ್ತಿಬ್ಬರು ವ್ಯಕ್ತಿಗಳು ಇರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಇದಿಷ್ಟೇ ಅಲ್ಲ ನಿರ್ಮಾಪಕ ಉಮಾಪತಿ ಜೊತೆಗೆ ಅರುಣಾಕುಮಾರಿ ಮಾಡಿದ್ದಾರೆ ಎನ್ನಲಾದ ವಾಟ್ಸ್​ ಆ್ಯಪ್ ಚಾಟ್ ಕೂಡ ಹೊರಬಿದ್ದಿದೆ. ನಿರಂತರವಾಗಿ ಮೆಸೇಜ್​ ಮೂಲಕ ಮತ್ತು ಕಾಲ್ ಮೂಲಕ ಅರುಣಾ ಕುಮಾರಿ ಅವರು, ಉಮಾಪತಿಯನ್ನ ಸೆಳೆಯಲು ಯತ್ನಿಸಿದಂತೆ ಕಂಡು ಬರುತ್ತೆ. ನಿಮ್ಮ ಫೇಸ್​ಬುಕ್ ಡಿಪಿಯಲ್ಲಿ ಚೆನ್ನಾಗಿ ಕಾಣ್ತಿದ್ದೀರಿ ಅಂತಾ ಅರುಣಾ ಕುಮಾರಿ ಮೆಸೇಜ್ ಮಾಡಿದ್ದಾರೆ. ಅಷ್ಟೇ ಅಲ್ಲ.. ನಮ್ಮನ್ನು ಎರಡು ನಿಮಿಷ ಆದ್ರೂ  ನೆನಪು ಮಾಡಿಕೊಳ್ಳಿ.. ನೀವು ಡ್ರಿಂಕ್ಸ್ ಮಾಡ್ತೀರಾ.. ಅಂತೆಲ್ಲ ಮಾತನಾಡಿರೋದು ಕೂಡ ಇದೆ.

ಅಷ್ಟೇ ಅಲ್ಲ ಚಾಟ್​ನಲ್ಲಿ ನಿರಂತರವಾಗಿ ತಾವು ಬ್ಯಾಂಕ್​​ನಲ್ಲಿ ಕೆಲಸ ಮಾಡ್ತಿರೋದನ್ನ ಕೂಡ ಉಮಾಪತಿಗೆ ನಂಬಿಸಿದ್ದಾರೆ ಎನಿಸುತ್ತೆ.. ಈ ನಡುವೆ ಒಂದು ಮೆಸೇಜ್​ನಲ್ಲಿ ಮಾತ್ರ ಉಮಾಪತಿಯವರು ಅರುಣಾ ಕುಮಾರಿಯವರಿಗೆ ನೀನೂ ಕೂಡ ಸ್ಮಾರ್ಟ್ ಆಗಿ ಯೋಚಿಸಿ ಆಟವಾಡು ಎಂದಿದ್ದಾರೆ. ಜೊತೆಗೆ ನಾವು ನಿನ್ನ ಜೊತೆಗಿದ್ದೇವೆ ಅಂತಲೂ ಹೇಳಿರುವುದನ್ನು ಕಾಣಬಹುದಾಗಿದೆ.

ಇದಷ್ಟೇ ಅಲ್ಲದೇ ನಿರ್ಮಾಪಕ ಉಮಾಪತಿ ಹಾಗೂ ಆರೋಪಿ ಅರುಣಾ ಕುಮಾರಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ಹೊರಬಿದ್ದಿವೆ. ಆಡಿಯೋದಲ್ಲಿ ಇಬ್ಬರೂ ಆತ್ಮೀಯವಾಗಿ ಮಾತನಾಡಿದ್ದಾರೆ.

The post ಉಮಾಪತಿಗೇ ಗಾಳ ಹಾಕಿದ್ರಾ ಅರುಣಾ ಕುಮಾರಿ? ಚಾಟ್.. ವಿಡಿಯೋ.. ಆಡಿಯೋ ಲೀಕ್ appeared first on News First Kannada.

Source: newsfirstlive.com

Source link