ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಉಮೇಶ್ ಕತ್ತಿ ಅವರು ರೈತರೊಬ್ಬರಿಗೆ ಸಾಯಿ ಎಂದು ಹೇಳಿದ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್​​ ಅಣಕು ಶವಯಾತ್ರರೆ ನಡೆಸಿ ಪ್ರತಿಭಟನೆ ನಡೆಸಿತು.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರು ಕತ್ತಿ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿ ರಾಜೀನಾಮೆಗೆ ಆಗ್ರಹಿಸಿದ್ದರು. ಅಲ್ಲದೇ ಕೊರೊನಾ ಕಾರಣದಿಂದ ರಾಜ್ಯದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲದ ಕಾರಣ ಕೆಲವೇ ಕೆಲವು ಕಾರ್ಯಕರ್ತರೊಂದಿಗೆ ಸೇರಿ ಮೌನ ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ ಸಚಿವರ ಹೇಳಿಕೆಗೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಗೆ ‌ಸಿದ್ಧತೆ ಆರಂಭಿಸಿದ ಹಿನ್ನೆಲೆ, ಕಾಂಗ್ರೆಸ್ ಭವನದ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಬ್ಯಾರಿಕೇಡ್ ಹಾಕಿ ಜನ ಸೇರಿದಂತೆ ಮುಂಜಾಗ್ರತೆ ವಹಿಸಿದ್ದ ಪೊಲೀಸರು ಕೊರೊನಾ ಮಾರ್ಗಸೂಚಿ ಪ್ರಕಾರ ಪ್ರತಿಭಟನೆ ಅವಕಾಶ ಇಲ್ಲ, ಪ್ರತಿಭಟನೆ ಮಾಡದಂತೆ ಮನವಿ ಮಾಡಿದರು. ಆದ್ದರಿಂದ ಸಿಎಂ ನಿವಾಸ ಎದುರು ಅಣಕು ಶವಯಾತ್ರೆ ನಡೆಸಲು ಉದ್ದೇಶಿಸಿದ್ದ ಕಾಂಗ್ರೆಸ್​ ತನ್ನ ಕಚೇರಿಯ ಮುಂಭಾಗವೇ ಪ್ರತಿಭಟನೆ ನಡೆಸಿ ಉಮೇಶ್​ ಕತ್ತಿ ರಾಜೀನಾಮೆಗೆ ಆಗ್ರಹಿಸಿತು.

The post ಉಮೇಶ್​ ಕತ್ತಿ ಹೇಳಿಕೆ ಖಂಡಿಸಿ ಅಣಕು ಶವಯಾತ್ರೆ ನಡೆಸಿದ ಕಾಂಗ್ರೆಸ್ appeared first on News First Kannada.

Source: newsfirstlive.com

Source link