ಉಮ್ರಾನ್ ಮಲಿಕ್​ಗೆ ಖುಲಾಯಿಸಿದ ಅದೃಷ್ಟ; ಟೀಮ್​ ಇಂಡಿಯಾದ ನೆಟ್​ ಬೌಲರ್​ ಆಗಿ ಆಯ್ಕೆ

14ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ತನ್ನ ವೇಗದ ಬೌಲಿಂಗ್​ನಿಂದಲೇ ಗಮನ ಸೆಳೆದ ವೇಗಿ ಉಮ್ರಾನ್​ ಮಲ್ಲಿಕ್​ಗೆ ಅದೃಷ್ಠ ಖುಲಾಯಿಸಿದೆ. ಐಪಿಎಲ್​ ಟೂರ್ನಿ ಮುಗಿದ ಬೆನ್ನಲ್ಲೇ ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ವೇಗಿ ಮಲ್ಲಿಕ್​ರನ್ನ ಯುಎಇನಲ್ಲೇ ಉಳಿಯುವಂತೆ ಬಿಸಿಸಿಐ ಸೂಚಿಸಿತ್ತು. ಇದೀಗ ಅವರನ್ನ ಮುಂಬರುವ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ನೆಟ್​ ಬೌಲರ್​ ಆಗಿ ಆಯ್ಕೆ ಮಾಡಲಾಗಿದೆ.

‘ಆತ ನೆಟ್​ ಬೌಲರ್​​ ಆಗಿ ತಂಡದೊಂದಿಗೆ ಇರುತ್ತಾನೆ. ಐಪಿಎಲ್​ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಈತನ ಎಸೆತಗಳನ್ನ ನೆಟ್ಸ್​​ನಲ್ಲಿ ಬ್ಯಾಟ್ಸ್​ಮನ್​ಗಳು ಎದುರಿಸುವುದು ಒಳ್ಳೆಯದು. ಅದರ ಜೊತೆಗೆ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯಂತ ದಿಗ್ಗಜರಿಗೆ ಹೇಗೆ ಬೌಲಿಂಗ್​ ಮಾಡಬೇಕು ಎಂಬುದನ್ನ ತಿಳಿಯಲು ಆತನಿಗೂ ಸಹಾಯಕವಾಗುತ್ತದೆ’ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಈ ಯುವ ವೇಗಿ 14 ಆವೃತ್ತಿ ಐಪಿಎಲ್​ನಲ್ಲಿ ಅತ್ಯಂತ ವೇಗದ ಎಸೆತ ಎಸೆದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 153 ಕಿ.ಮೀ ವೇಗದಲ್ಲಿ ಬೌಲಿಂಗ್​ ಮಾಡಿದ ಹೆಗ್ಗಳಿಕೆ ಉಮ್ರಾನ್​ ಮಲ್ಲಿಕ್​ದ್ದಾಗಿದೆ.

News First Live Kannada

Leave a comment

Your email address will not be published. Required fields are marked *