ಉಯ್ಯಾಲೆ ದಾರ ಹರಿದು.. 6000 ಅಡಿಯಿಂದ ಕೆಳಕ್ಕೆ ಬಿದ್ದ ಸ್ನೇಹಿತೆಯರು.. ಆಮೇಲ್​ ಏನಾಯ್ತು?

ಉಯ್ಯಾಲೆ ದಾರ ಹರಿದು.. 6000 ಅಡಿಯಿಂದ ಕೆಳಕ್ಕೆ ಬಿದ್ದ ಸ್ನೇಹಿತೆಯರು.. ಆಮೇಲ್​ ಏನಾಯ್ತು?

ರಷ್ಯಾ: ಈಗಿನ ಕಾಲದಲ್ಲಿ, ಅಡ್ವೆಂಚರಸ್​ ಅಂದ್ರೆ ಯಾರಿಗ್​ ತಾನೆ ಇಷ್ಟ ಆಗಲ್ಲ ಹೇಳಿ? ಆಕಾಸದಿಂದ ಜಿಗಿಯೋ ಸ್ಕೈ ಡೈವಿಂಗ್​, ಭೂಮಿಯಿಂದ ಮೇಲಕ್ಕೆ ಹಾರೋ ಪಾರಾಸೈಲಿಂಗ್​,ಪ್ಯಾರಾಗ್ಲೈಡಿಂಗ್​. ಅಷ್ಟೇ ಯಾಕೇ, ದೊಡ್ಡ ಉಯ್ಯಾಲೆಮೇಲೆ ಕೂತು ಊಗ್ಲಾಡದು, ಹೀಗಾ ಅನೇಕಾ ಅಡ್ವೆಂಚರ್​ ಮಾಡೋಕೆ ತುಂಬಾ ಜನರಿಗೆ ಆಸೆಯಿರುತ್ತೆ.. ಆದ್ರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್​ ಆಗಿದೆ. ಅದನ್ನೇನಾದ್ರು ನೀವ್​ ನೋಡಿದ್ರೆ ಮೈಯೆಲ್ಲಾ ಜುಮ್​ ಅನ್ನುತ್ತೆ.

ರಷ್ಯಾದ ಡಗೆಸ್ಟಾನ್ ಪ್ರವಾಸಿ ತಾಣದ ತೂಗುಯ್ಯಾಲೆ ತೂಗುವ ಯಡವಟ್ಟಿನಿಂದ ಇಬ್ಬರು ಯುವಯಿತರು 6,000 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದೆ.ಈ ಮೈ ಜುಮ್ಮೆನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 6,000 ಅಡಿ ಎತ್ತರದಲ್ಲಿರುವ ಸುಲಾಕ್ ಕ್ಯಾನ್ಯನ್ ಮೆಲಿರುವ ತೂಗುಯ್ಯಾಲೆಯಲ್ಲೆ ಕೂತು ಆಡ್ಬೇಕು ಅನ್ನೋ ತುಂಬಾ ಜನರಲ್ಲಿರುತ್ತೆ. ಅಲ್ಲಿಗೆ ಹೋದವ್ರು, ಅದನ್ನ ಆಡಿ,ಆನಂದ ಅನುಭವಿಸುತ್ತಾರೆ.ಹೀಗೆ ಇಬ್ಬರು ಯುವತಿಯರು ಆನಂದ ಅನುಭವಿಸುತ್ತಿರುವಾಗ ತೂಗುವಾಗ  ಉಯ್ಯಾಲೆ, ರಭಸಕ್ಕೆ ಹೋಗಿ ಕಂಬಕ್ಕೆ ಬಡಿದಿದೆ. ಇದರಿಂದ ಇಬ್ಬರು ಯುವತಿಯರು ಪ್ರಪಾತಕ್ಕೆ ಉರುಳಿದ್ದಾರೆ. ಆದರೆ, ಆ ಪ್ರಪಾತದ ತುದಿಯಲ್ಲಿ ಕಟ್ಟಿಗೆ ಸ್ಟ್ಯಾಂಡ್​ ಮಾಡಿದ್ದರಿಂದ.. ಈ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಅಂತಾರೆ ಅಲ್ಲಿನವರು.

 

The post ಉಯ್ಯಾಲೆ ದಾರ ಹರಿದು.. 6000 ಅಡಿಯಿಂದ ಕೆಳಕ್ಕೆ ಬಿದ್ದ ಸ್ನೇಹಿತೆಯರು.. ಆಮೇಲ್​ ಏನಾಯ್ತು? appeared first on News First Kannada.

Source: newsfirstlive.com

Source link