ಉಳುಮೆ ಮಾಡುವಾಗ ಪಾಳು ಬಾವಿಗೆ ಬಿದ್ದ ಜೋಡಿ ಎತ್ತುಗಳು ಹಾಗೂ ರೈತ! ಮುಂದೇನಾಯ್ತು? | Farmer and 2 bullocks fall in to well without water but rescued in Kadeshigenahalli in chikkaballapur


ಉಳುಮೆ ಮಾಡುವಾಗ ಪಾಳು ಬಾವಿಗೆ ಬಿದ್ದ ಜೋಡಿ ಎತ್ತುಗಳು ಹಾಗೂ ರೈತ! ಮುಂದೇನಾಯ್ತು?

ಉಳುಮೆ ಮಾಡುವಾಗ ಪಾಳು ಬಾವಿಗೆ ಬಿದ್ದ ಜೋಡಿ ಎತ್ತುಗಳು ಹಾಗೂ ರೈತ! ಮುಂದೇನಾಯ್ತು?

ಜಮೀನು ಉಳುಮೆ ಮಾಡುವಾಗ ಆಕಸ್ಮಿಕವಾಗಿ ರೈತ ಹಾಗೂ ಎತ್ತುಗಳು ಬಾವಿಗೆ ಬಿದ್ದಿವೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಿಕ್ಕಬಳ್ಳಾಪುರ: ಸರಿಸುಮಾರು 50 ಅಡಿ ಆಳದ ಬಾವಿಗೆ ರೈತರೊಬ್ಬರು (Farmer) ಜೋಡಿ ಎತ್ತುಗಳ (bullocks) ಸಮೇತ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ (chikkaballapur) ತಾಲ್ಲೂಕಿನ ಕಡೇಶಿಗೇನಹಳ್ಳಿ ಗ್ರಾಮದಲ್ಲಿ (Kadeshigenahalli) ನಡೆದಿದೆ. ರೈತ ಮುನೇಗೌಡ ಹಾಗೂ ರೈತನ 2 ಎತ್ತುಗಳನ್ನು ರಕ್ಷಣೆ ಮಾಡಲಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ರೈತ ಹಾಗೂ ಆತನ ಎತ್ತುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳು ರೈತನಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನು ಉಳುಮೆ ಮಾಡುವಾಗ ಆಕಸ್ಮಿಕವಾಗಿ ರೈತ ಹಾಗೂ ಎತ್ತುಗಳು ಬಾವಿಗೆ ಬಿದ್ದಿವೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

TV9 Kannada


Leave a Reply

Your email address will not be published.