ಬೈಕ್​ ಅಪಘಾತದಲ್ಲಿ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ಅವರ ಬಹುದೊಡ್ಡ ಆಸೆಯನ್ನು ಪೂರ್ಣ ಮಾಡಲು ಉಸಿರು ತಂಡ ಮುಂದಾಗಿದೆ. ಹೆಚ್.ಡಿ ಕೋಟೆ ಸಮೀಪದ ಬುಡಕಟ್ಟು ಜನಾಂಗ ಹಾಡಿ ಜನರಿಗೆ ಮನೆ ಕಟ್ಟಿಕೊಡಲು ಸಂಚಾರಿ ವಿಜಯ್ ಕನಸು ಕಂಡಿದ್ದರು. ಆದರೆ ಅವರ ಈ ಕೆಲಸ ಅಪೂರ್ಣವಾಗಿಯೇ ಉಳಿದಿತ್ತು.

ಸದ್ಯ ಈ ಆಸೆಯನ್ನು ಪೂರೈಸಲು ಉಸಿರು ತಂಡ ಮುಂದಾಗಿದ್ದು, ಅಲ್ಲಿನ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸುವ ಸಲುವಾಗಿ ಆ ಮೇಲ್ಚಾವಣಿಗಳಿಗೆ ಅನುಗುಣವಾಗಿ ಟಾರ್ಪಲ್ ಸಜ್ಜುಗೊಳಿಸಲು ಅಳತೆ ತೆಗೆದುಕೊಳ್ಳುವ ಕೆಲಸ ಆರಂಭಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಏಳು ಗಂಟೆಗೆ ಉಸಿರು ಬಳಗದ ಪವನ್ ದರೆಗುಂಡಿ , ಮಾದೇಶ್ ಗೌಡ್ರು, ಶ್ರೀ ಹರ್ಷ ಹುಣಸೂರು, ಚಿನ್ಮಯ್ ಅವರು ಹೆಚ್​​.ಡಿ ಕೋಟೆ ಸಮೀಪದ ಬುಡಕಟ್ಟು ಜನಾಂಗದ ಹಾಡಿಗೆ ಹೋಗಿದ್ದಾರೆ. ಉಸಿರು ತಂಡದ ಕವಿರಾಜ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

The post ‘ಉಸಿರು’ ಬಳಗದಿಂದ ಸಂಚಾರಿ ವಿಜಯ್​​​ ಅಪೂರ್ಣ ಆಸೆ ಪೂರೈಸಲು ಮೊದಲ ಹೆಜ್ಜೆ appeared first on News First Kannada.

Source: newsfirstlive.com

Source link