ನವದೆಹಲಿ: ಉತ್ತರ ಪ್ರದೇಶದಲ್ಲಿ ಚುನಾವಣಾ ಅಖಾಡ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಏರಲು ತಂತ್ರ, ಪ್ರತಿತಂತ್ರ ರೂಪಿಸುತ್ತಿದೆ. ಇದರ ಮಧ್ಯೆ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋ ಲೆಕ್ಕಾಚಾರಗಳು ಶುರುವಾಗಿವೆ. ಇದೀಗ ಟೈಮ್ಸ್ ನೌ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಕೂಡ ಪ್ರಕಟವಾಗಿದೆ.
2022ರ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಅಂತ ಟೈಮ್ಸ್ ನೌ ಸಮೀಕ್ಷೆ ಹೇಳಿದೆ. ಚುನಾವಣೆಗೂ ಮುನ್ನ ಜನರ ನಾಡಿಮಿಡಿತದ ಪರೀಕ್ಷೆಯಲ್ಲಿ ಬಿಜೆಪಿ 239-245 ಸ್ಥಾನ ಪಡೆದಿದ್ದು, ಯೋಗಿ ಆದಿತ್ಯಾನಾಥ್ ಮತ್ತೆ ಸಿಎಂ ಆಗ್ತಾರೆ ಎಂಬ ಫಲಿತಾಂಶವನ್ನ ಕೊಟ್ಟಿದೆ. ಸಮಾಜವಾದಿ ಪಕ್ಷಕ್ಕೆ 119-125, ಬಿಎಸ್ಪಿಗೆ 28-32 ಸ್ಥಾನಗಳು ಹಾಗೂ ಕಾಂಗ್ರೆಸ್ಗೆ 5-8, ಇತರೆ 0-1 ಸ್ಥಾನ ಸಿಗಲಿದೆ ಅಂತ ಸಮೀಕ್ಷೆ ಹೇಳಿದೆ.
The post ಉ.ಪ್ರದೇಶಕ್ಕೆ ಯೋಗಿ ಆದಿತ್ಯನಾಥರೇ ಕಿಂಗ್ -ಟೈಮ್ಸ್ ನೌ ಸಮೀಕ್ಷೆ appeared first on News First Kannada.