ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಚ್ಚಿ ಬೀಳಿಸುವ ಕೃತ್ಯವೊಂದು ನಡೆದಿದ್ದು, ಮಾಸ್ಕ್​ ಹಾಕಿಲ್ಲ ಅನ್ನೋ ಆರೋಪಕ್ಕೆ ಗ್ರಾಹಕರೊಬ್ಬರಿಗೆ ಬ್ಯಾಂಕ್ ಭದ್ರತಾ ಸಿಂಬ್ಬಂದಿ ಶೂಟ್​ ಮಾಡಿದ್ದಾರೆ!

ಮಾಸ್ಕ್​ ಹಾಕಿಲ್ಲ ಅನ್ನೋ ಕಾರಣಕ್ಕೆ ಕುಪಿತನಾದ ಸೆಕ್ಯೂರಿಟಿ, ಗ್ರಾಹಕನ ಕಾಲಿಗೆ ಗುಂಡು ಹಾರಿಸಿದ್ದಾನೆ. ಬರೇಲಿ ಜಂಕ್ಷನ್ ರೋಡ್​ನಲ್ಲಿರುವ ‘ಬ್ಯಾಂಕ್ ಆಫ್ ಬರೋಡ’ದ ಬ್ರ್ಯಾಂಚ್​ನಲ್ಲಿ ಈ ಘಟನೆ ನಡೆದಿದೆ.

ಗ್ರಾಹಕ ಬ್ಯಾಂಕ್​ ಬರುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್​​, ಮಾಸ್ಕ್​ ಎಲ್ಲಿ ಎಂದು ಕೇಳಿದ್ದಾನೆ. ನಂತರ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ಉದ್ರೇಕಕ್ಕೊಳಗಾದ ಸೆಕ್ಯೂರಿಟಿ ಗಾರ್ಡ್​, ಆತನ ಕಾಲಿಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಪೊಲೀಸರು ಸೆಕ್ಯೂರಿಟಿ ಗಾರ್ಡ್​​ ಬಂಧಿಸಿ ವಿಚಾರಣೆ ಶುರುಮಾಡಿದ್ದಾರೆ. ಇನ್ನು ಗಾಯಗೊಂಡಿರುವ ಗ್ರಾಹಕ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

The post ಉ.ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಕೃತ್ಯ.. ಬ್ಯಾಂಕ್​​ನಲ್ಲಿ ಮಾಸ್ಕ್​ ಹಾಕದ ಗ್ರಾಹಕನ ಮೇಲೆ ಫೈರಿಂಗ್ appeared first on News First Kannada.

Source: newsfirstlive.com

Source link