ನವದೆಹಲಿ: ಮುಂದಿನ ಉತ್ತರ ಪ್ರದೇಶ ವಿಧಾಸಭಾ ಚುನಾವಣೆ ಗೆಲ್ಲಲು ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವೂ ಈಗಿನಿಂದಲೇ ಭಾರೀ ಸರ್ಕಸ್​​ ನಡೆಸುತ್ತಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ರಾಜಕೀಯ ಸ್ಥಿತ್ಯಂತರ ಶುರುವಾಗಿದ್ದು, ಜಾತಿ ಲೆಕ್ಕಾಚಾರದ ಮೇಲೆ ಚುನಾವಣೆ ಗೆಲ್ಲಲು ಎಲ್ಲಾ ಪಕ್ಷಗಳು ತಂತ್ರ ಹೆಣೆದಿವೆ. ಸದ್ಯ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಬ್ರಾಹ್ಮಣ ಸಮುದಾಯ ಮುನಿಸಿಕೊಂಡಿದೆ. ಹೀಗಾಗಿ ಹೇಗಾದರೂ ಸರಿ ಬ್ರಾಹ್ಮಣ ಮತಗಳನ್ನು ಪಡೆಯಲೇಬೇಕೆಂದು ಬಿಎಸ್​ಪಿ ನಿರ್ಧರಿಸಿದ್ದಾರೆ. ಆದ್ದರಿಂದ ಹಲವು ತಂತ್ರಗಳನ್ನು ರೂಪಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡುತ್ತಾ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿಯವರು ತನ್ನ ದಲಿತ-ಬ್ರಾಹ್ಮಣ ಸೂತ್ರದ ಬಗ್ಗೆ ಅಚ್ಚರಿ ಸಂಗತಿಯೊಂದು ಬಿಚ್ಚಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬ್ರಾಹ್ಮಣರು ಬಿಜೆಪಿಗೆ ಯಾವುದೇ ಕಾರಣಕ್ಕೂ ವೋಟ್​​ ಹಾಕೋದಿಲ್ಲ ಎಂಬ ನಂಬಿಕೆ ನನಗಿದೆ. ಬ್ರಾಹ್ಮಣರನ್ನು ತಲುಪುವ ಸಲುವಾಗಿಯೇ ಬಿಎಸ್​​ಪಿ ಪ್ರಧಾನ ಕಾರ್ಯದರ್ಶಿ ಎಸ್​​ಸಿ ಮಿಶ್ರಾ ನೇತೃತ್ವದಲ್ಲಿ ಬ್ರಾಹ್ಮಣ ಸಮ್ಮೇಳ ನಡೆಸುತ್ತಿದ್ದೇವೆ. ಜುಲೈ 23ನೇ ತಾರೀಕಿನಂದು ಈ ಬ್ರಾಹ್ಮಣ ಸಮ್ಮೇಳನ​​ ಅಯೋಧ್ಯೆಯಲ್ಲಿ ನಡೆಯಲಿದೆ ಎಂದರು.

ಇದೇ ವೇಳೆ ನನ್ನ ಪಕ್ಷದ ಸಂಸದರಿಗೆ ಮುಂದಿನ ಮುಂಗಾರು ಅಧಿವೇನದಲ್ಲಿ ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತೆ ಆದೇಶಿಸಿದ್ದೇನೆ. ಕೇಂದ್ರ ಸರ್ಕಾರದ ಜನರಿಗೆ ಉತ್ತರ ನೀಡಬೇಕಾದ ಹಲವು ವಿಚಾರಗಳ ಬಗ್ಗೆ ನಮ್ಮ ಸಂಸದರು ಸಂಸತ್​​ನಲ್ಲಿ ಚರ್ಚೆ ಮಾಡಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

The post ಉ.ಪ್ರ ಚುನಾವಣೆ ಮೇಲೆ ಹದ್ದಿನ ಕಣ್ಣು; ಬ್ರಾಹ್ಮಣ ಸಮ್ಮೇಳನ ನಡೆಸಲು ಮುಂದಾದ ಮಾಯಾವತಿ appeared first on News First Kannada.

Source: newsfirstlive.com

Source link