ಊಟಕ್ಕೆ ಮೊದಲು ಉಪ್ಪಿನಕಾಯಿ ಅಲ್ಲ ಸ್ವಾಮಿ, ಸಿಹಿತಿಂಡಿ! ಇದನ್ನು ಓದಿದರೆ ನಿಮಗೆ ಗೊತ್ತಾಗುತ್ತದೆ! | Contrary to our practice sweets should be consumed before we start eating meal, says an expert ARB


ಊಟಕ್ಕೆ ಮೊದಲು ಉಪ್ಪಿನಕಾಯಿ ಅಲ್ಲ ಸ್ವಾಮಿ, ಸಿಹಿತಿಂಡಿ! ಇದನ್ನು ಓದಿದರೆ ನಿಮಗೆ ಗೊತ್ತಾಗುತ್ತದೆ!

ಊಟಕ್ಕೆ ಮೊದಲು ಸಿಹಿತಿಂಡಿ

ಆಯುರ್ವೇದಲ್ಲಿ ಊಟದ ಕ್ರಮ ಹೀಗಿದೆ, ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಮತ್ತು ಆಮ್ಲೀಯ. ಅದರರ್ಥ ಊಟವನ್ನು ಸಿಹಿಯಿಂದ ಆರಂಭಿಸಬೇಕು, ಆಮೇಲೆ ಉಪ್ಪಿನಾಂಶದಿಂದ ಕೂಡಿದ ಆಹಾರ ಪದಾರ್ಥಗಳು ಮತ್ತು ಕೊನೆಯಲ್ಲಿ ಕಹಿ ಪದಾರ್ಥಗಳು.

ನಾವೆಲ್ಲ ಊಟದ ನಂತರವೇ ಸ್ವೀಟ್ಸ್ (sweets) ತಿನ್ನುತ್ತೇವೆ. ಅದು ಯಾವುದೇ ನಮೂನೆಯ ಸ್ವೀಟ್ ಆಗಿರಬಹುದು ಅಂದರೆ, ಜಾಮೂನು, ಹಲ್ವಾ ಮುಂತಾದವು, ಡೆಸರ್ಟ್, ಐಸ್ ಕ್ರೀಮ್ ಮೊದಲಾದವುಗಳನ್ನು ನಾವು ತಿನ್ನೋದು ಊಟವಾದ ಮೇಲೆಯೇ. ಮದುವೆ (wedding), ಬರ್ತ್​ಡೇ (birthday party) ಪಾರ್ಟಿಗಳಲ್ಲೂ ಇದೇ ವಿಧಾನ ಬಳಸುಲಾಗುತ್ತದೆ. ನಾವು ತಪ್ಪು ಹೇಳುತ್ತಿಲ್ಲ ತಾನೆ? ಅದರೆ ನಮ್ಮ ತಾತ ಮುತ್ತಾತಂದಿರು ಸಿಹಿಯನ್ನು ಊಟಕ್ಕೆ ಮೊದಲು ತಿನ್ನುತ್ತಿದ್ದರು ಅಂತ ನಿಮಗೆ ಗೊತ್ತಾ? ಅವರ ಜಮಾನಾದಲ್ಲಿ ವೈದ್ಯಕೀಯ ವಿಜ್ಞಾನ ಇಷ್ಟೆಲ್ಲ ಮುಂದುವರಿದಿರಲಿಲ್ಲವಾದರೂ ಅವರಿಗೆ ತಮ್ಮ ದೇಹವನ್ನು ಚೆನ್ನಾಗಿ ನೋಡಿಕೊಳ್ಳುವುದು ನಮಗಿಂತ ಚೆನ್ನಾಗಿ ಗೊತ್ತಿತ್ತು ಅನಿಸುತ್ತೆ. ಸ್ವೀಟ್ಸ್ ಅನ್ನು ಅವರು ಊಟಕ್ಕೆ ಮೊದಲು ತಿನ್ನುತ್ತಿದ್ದರ ಹಿಂದೆ ಕಾರಣವಿರಲೇಬೇಕು ಮಾರಾಯ್ರೇ.

ಆಯುರ್ವೇದಲ್ಲಿ ಊಟದ ಕ್ರಮ ಹೀಗಿದೆ, ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಮತ್ತು ಆಮ್ಲೀಯ. ಅದರರ್ಥ ಊಟವನ್ನು ಸಿಹಿಯಿಂದ ಆರಂಭಿಸಬೇಕು, ಆಮೇಲೆ ಉಪ್ಪಿನಾಂಶದಿಂದ ಕೂಡಿದ ಆಹಾರ ಪದಾರ್ಥಗಳು ಮತ್ತು ಕೊನೆಯಲ್ಲಿ ಕಹಿ ಪದಾರ್ಥಗಳು. ನಮ್ಮ ಆಹಾರದಲ್ಲಿ ಸ್ವಾದ್ದದ ಈ ಆರು ಅಂಶಗಳಿದ್ದರೆ ಅರೋಗ್ಯವಂತರಾಗಿರುತ್ತೇವೆ. ಒಂದೇ ಬಗೆ ಸ್ವಾದದ ಅಥವಾ ಕೆಲ ಬಗೆಯ ಸ್ವಾದಗಳನ್ನು ಸೇವಿಸಿದರೆ ಆರೋಗ್ಯದ ಸಮಸ್ಯೆಗಳು ಎದುರಾಗಬಹುದು.

ಆಯುಶಕ್ತಿ ಸಂಸ್ಥೆಯ ಸಹ-ಸಂಸ್ಥಾಪಕಿಯಾಗಿರುವ ಡಾ ಸ್ಮಿತಾ ನರಮ್ ಅವರು ಊಟಕ್ಕೆ ಕುಳಿತಾಗ ಮೊದಲು ಸಿಹಿ ಪದಾರ್ಥ ಯಾಕೆ ತಿನ್ನಬೇಕು ಅಂತ ವಿವರಿಸಿದ್ದಾರೆ.

ಸಿಹಿ ಸ್ವಾದವು ನಮ್ಮ ರುಚಿ ಗ್ರಂಥಿಗಳ ಮೇಲೆ ಇತರ ರುಚಿಗಳಿಗಿಂತ ಮೊದಲು ಕೆಲಸ ಮಾಡಲಾರಂಭಿಸುತ್ತದೆ. ಆರಂಭದಲ್ಲಿ ಸಿಹಿ ಪದಾರ್ಥಗಳನ್ನು ತಿಂದರೆ ಹೊಟ್ಟೆಗೆ ಸಂಬಂಧಿಸಿದ ಹೊರಸೂಸುವಿಕೆಯ ಪ್ರಗತಿಯನ್ನು ಹೆಚ್ಚಿಸುತ್ತದೆ; ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ನಮ್ಮ ರುಚಿ ಗ್ರಂಥಿಗಳಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕೆಲವು ಅಧ್ಯಯನಗಳು ಊಟವನ್ನು ಸಿಹಿತಿಂಡಿಗಳೊಂದಿಗೆ ಕೊನೆಗೊಳಿಸಿದರೆ ಅವು ಆಮ್ಲದೊಂದಿಗೆ ಪ್ರತಿಕ್ರಿಯಿಸಿ ಉಬ್ಬರಿಕೆ, ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ನಂಥ ಸಮಸ್ಯೆ ಸೃಷ್ಟಿಸುತ್ತವೆ ಅನ್ನೋದನ್ನು ಸಾಬೀತು ಮಾಡಿವೆ.

ಸಿಹಿತಿಂಡಿಗಳನ್ನು ಮೊದಲು ಸೇವಿಸಬೇಕೆಂದು ಹೇಳಲು ಬೇರೆ ಕಾರಣಗಳೆಂದರೆ ಅವು ಭೂಮಿ ಮತ್ತು ನೀರಿನ ಅಂಶಗಳಿಂದ ತಯಾರಿಸಲ್ಪಟ್ಟಿರುತ್ತವೆ ಮತ್ತು ಸ್ವಾಭಾವಿಕವಾಗಿಯೇ ಭಾರವಾಗಿರುತ್ತವೆ. ಹಾಗಾಗಿ ಅವುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಊಟದ ಆರಂಭದಲ್ಲಿ ಜೀರ್ಣಕಾರಿ ಶಕ್ತಿಯು ಅತ್ಯುನ್ನತ ಮಟ್ಟದಲ್ಲಿರುವುದರಿಂದ ಮೊದಲೇ ಸಿಹಿ ಪದಾರ್ಥ ತಿಂದರೆ ಜೀರ್ಣಿಸಿಕೊಳ್ಳುವುದು ಸುಲಭವಾಗುತ್ತದೆ. ಊಟದ ನಂತರ ಸಿಹಿ ತಿಂದರೆ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ.

ನಿಧಾನದ ಚಯಾಪಚಯ ಕ್ರಿಯೆಯನ್ನು ಹೊಂದಿರುವ ದೇಹವು ಮಧುಮೇಹ, ಬೊಜ್ಜು, ಥೈರಾಯ್ಡ್ ಅಸ್ವಸ್ಥತೆಗಳು ಮತ್ತು ಪಿಸಿಓಎಸ್‌ನಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಊಟಕ್ಕೆ ಮುಂಚೆ ಸಿಹಿತಿಂಡಿಗಳನ್ನು ಸೇವಿಸುವುದರಿಂದ ದೇಹವು ನಮ್ಮ ದೇಹದಲ್ಲಿ ಜೀರ್ಣಕಾರಿ ಹಾರ್ಮೋನು ಬಿಡುಗಡೆ ಹೊಂದಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಊಟದ ನಂತರ ಸಿಹಿತಿಂಡಿಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನಗೊಂಡು ಅದು ತೊಂದರೆಗೊಳಗಾಗುತ್ತದೆ.

ಊಟದ ಕೊನೆಯಲ್ಲಿ ಸಿಹಿತಿಂಡಿಗಳು ಬದಲು ಸೋಂಫ್ ಅಥವಾ ಮಜ್ಜಿಗೆ ಸೇವಿಸಬಹುದು. ಯಾಕೆಂದರೆ ಇವರೆಡು ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಮತ್ತು ಬಾಯಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ಊಟದ ನಂತರ ಅಡಕೆ ಜೊತೆ ವೀಳ್ಯದೆಲೆಯನ್ನು ಇಲ್ಲವೇ ನಿಮ್ಮ ಮನೆ ಪಕ್ಕದ ಬೀಡಾ ಅಂಗಡಿಯಿಂದ ಬೀಡಾ ಕಟ್ಟಿಸಿಕೊಂಡು ತಿನ್ನಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *