ಊಟ ಮುಗಿಸಿ ಬರುವಾಗ ದುರಂತ; ವಿದ್ಯುತ್ ತಂತಿ ತಗುಲಿದ್ದ ಸ್ನೇಹಿತನ ರಕ್ಷಿಸಿಲು ಹೋಗಿ ಇಬ್ಬರೂ ಸಾವು


ಯಾದಗಿರಿ: ಹೋಟೆಲ್​ ಮೇಲ್ಛಾವಣೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ನಾರಾಯಣಪೇಟನ ಸಿಂಗಾರಂ ಕ್ರಾಸ್ ಬಳಿ ನಡೆದಿದೆ.

ವಂಶಿರಾಜ್ ಪತ್ತಿ ( 21) ಮತ್ತು ರವಿ ಹೂಗಾರ(22 ) ಮೃತ ದುರ್ದೈವಿಗಳು. ಇವರು ಯಾದಗಿರಿ ಜಿಲ್ಲೆಯ ಗುರಮಿಠಕಲ್ ಪಟ್ಟಣದ ನಿವಾಸಿಗಳಾಗಿದ್ದು ಕೆಲಸದ ನಿಮಿತ್ತ ನಾರಾಯಣಪೇಟಗೆ ಹೋಗಿದ್ದರು. ಈ ವೇಳೆ ಹೋಟೆಲ್ ಒಂದರಲ್ಲಿ ಊಟ ಮುಗಿಸಿಕೊಂಡು ಬರುತ್ತಿರುವಾಗ ವಿದ್ಯುತ್ ತಂತಿ ತಗುಲಿದೆ. ಗೆಳೆಯನನ್ನು ರಕ್ಷಿಸಲು ಹೋದ ಇನ್ನೊಬ್ಬ ಮಿತ್ರನಿಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

ಹೋಟೆಲ್ ಮಾಲೀಕ ಮತ್ತು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎನ್ನಲಾಗಿದೆ. ಈ ಕುರಿತು ನಾರಾಯಣಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News First Live Kannada


Leave a Reply

Your email address will not be published. Required fields are marked *