ಊರಿಗೆಲ್ಲ ಬುದ್ಧಿ ಹೇಳೋ ಸೋನಂ ಕಪೂರ್​ ಪತಿಗೆ ಬಿಗ್​ ಶಾಕ್; ತೆರಿಗೆ ಉಳಿಸಲು ಅಮೆರಿಕಾಕ್ಕೇ ಮೋಸ?


ಬಾಲಿವುಡ್​ನ ಖ್ಯಾತ ನಟಿ ಸೋನಂ ಕಪೂರ್ ಪತಿ ಆನಂದ್ ಅಹುಜಾ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. ಅಮೆರಿಕ ಮೂಲದ ಶಿಪ್‌ಮೆಂಟ್ ಕಂಪನಿಯೊಂದು ಉದ್ಯಮಿಯಾಗಿರುವ ಆನಂದ್ ಅಹುಜಾ ಮೇಲೆ ತೆರಿಗೆ ವಂಚನೆಯ ಆರೋಪ ಮಾಡಿದೆ. ಇತ್ತೀಚಿಗೆ ಆನಂದ್​ ಅಹುಜಾ ಅವರು ಅಂತರಾಷ್ಟ್ರೀಯ ಕಂಪನಿಯ ವಿರುದ್ಧ, ಗ್ರಾಹಕ ಸೇವೆಯ ಕುರಿತು ವಿರುದ್ಧ ಟ್ವಿಟರ್​ನಲ್ಲಿ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೆ ಇದೀಗ ಅದೇ ಕಂಪನಿ ಆನಂದ್​ ಅಹುಜಾ ಅವರು ತೆರಿಗೆ ಮತ್ತು ಕಸ್ಟಮ್ ಸುಂಕವನ್ನು ತಪ್ಪಿಸಲು, ನಕಲಿ ದಾಖಲೆಗಳನ್ನು ಬಳಿಸಿದ್ದಾರೆ ಎಂದು ಆರೋಪಿಸಿದೆ.

2022ರ ಜನವರಿಯಲ್ಲಿ ಟ್ವೀಟ್​ ಮಾಡಿದ್ದ ಆನಂದ್ ಅಹುಜಾ ಅವರು, ಇದರಲ್ಲಿ ಕಂಪನಿಯೊಂದರಿಂದ ಸಾಗಣೆಕೆಯ ವಿಳಂಬವನ್ನು ಉಲ್ಲೇಖಿಸಿ, ಅಧಿಕೃತ ದಾಖಲೆಗಳನ್ನು ಕಂಪನಿ ತಿರಸ್ಕರಿಸುತ್ತಿದೆ. ಈ ಅಡಚಣೆಗೆ ಪ್ರಮುಖ ಕಾರಣ ಕಂಪನಿಯ ನಿರ್ಲಕ್ಷ್ಯವೇ ಎಂದು ಆರೋಪ ಮಾಡಿದ್ದರು. ಇನ್ನು ಇವರ ಆರೋಪಕ್ಕೆ ಉತ್ತರಿಸಿದ್ದ ಕಂಪನಿ ಟ್ವೀಟ್​ ಮಾಡಿ ‘ಅಸಲಿಗೆ ಸಮಸ್ಯೆಯಾಗಿರುವುದು ಅವರಿಗೆ ಒದಗಿಸಲಾದ ಸೇವೆಗಳಿಂದಲ್ಲ. ಅದರ ಬದಲಾಗಿ ಅವರು ಒದಗಿಸಿದ ದಾಖಲೆಗಳು ನಿಖರತೆಯಿಂದ ಕೂಡಿಲ್ಲ’ ಎಂದು ಬರೆದುಕೊಂಡಿದೆ.

News First Live Kannada


Leave a Reply

Your email address will not be published.