ಬೆಂಗಳೂರು: ಸರ್ಕಾರದಿಂದ 14 ದಿನಗಳ ಬಿಗಿ ಕ್ರಮ ಹಿನ್ನಲೆ ನಾಳೆ ರಾತ್ರಿಯಿಂದ ಸಾರಿಗೆ ಸಂಪೂರ್ಣ ಬಂದ್ ಆಗಲಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಜನರು ತಮ್ಮ ತಮ್ಮ ಊರುಗಳತ್ತ ಹೊರಟು ನಿಂತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳ ಸಿಬ್ಬಂದಿ ಸುಲಿಗೆಗೆ ಇಳಿದಿದ್ದಾರೆ.

ಜನರ ಬಳಿ ಎಂದಿನ ದಿನಗಳಿಗಿಂತ ದುಪ್ಪಟ್ಟು ಹಣವನ್ನ ಸಿಬ್ಬಂದಿ ಕೇಳುತ್ತಿದ್ದಾರೆ.. ಎಂದಿನ ದರಕ್ಕಿಂತ 500-600 ರೂ ಹೆಚ್ಚಿಗೆ ಹಣ ಕೇಳುತ್ತಿರುವ ಬಗ್ಗೆ ವರದಿಯಾಗಿದೆ. ಪ್ರತಿಬಾರಿ ಈ ರೀತಿಯ ಸಂದರ್ಭಗಳಲ್ಲಿ ಖಾಸಗಿ ವಾಹನಗಳ ಸಿಬ್ಬಂದಿಯಿಂದ ಜನರ ಸುಲಿಗೆ ನಡೆಯುತ್ತಿದೆ ಅಂತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವು ಊರುಗಳಿಗೆ ಖಾಸಗಿ ವಾಹನಗಳು ಕೇಳುತ್ತಿರುವ ಹಣದ ವಿವರ ಇಂತಿದೆ.

ಹುಬ್ಬಳ್ಳಿ- 1600
ಮಂಗಳೂರು- 2500
ಬಳ್ಳಾರಿ- 1500
ಕುಕ್ಕೆ ಸುಬ್ರಹ್ಮಣ್ಯ- 1600
ವಿಜಯಪುರ- 1800

The post ಊರಿನತ್ತ ಹೊರಟ ಜನರಿಂದ ಸುಲಿಗೆಗಿಳಿದ ಖಾಸಗಿ ಬಸ್​ಗಳು.. ಟಿಕೆಟ್​ ದರ 500-600 ಏರಿಕೆ appeared first on News First Kannada.

Source: News First Kannada
Read More