ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಾಗಲಿರೋ ಹಿನ್ನೆಲೆ ಜನರು ಸಿಲಿಕಾನ್ ಸಿಟಿ ತೊರೆದು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಬಸ್​ ಸಂಚಾರ ಇಲ್ಲದಿರೋ ಕಾರಣ ರೈಲುಗಳ ಮೊರೆ ಹೋಗ್ತಿದ್ದಾರೆ. ಹೀಗಾಗಿ ರೇಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ಉಂಟಾಗ್ತಿದೆ.

ರೈಲು ನಿಲ್ದಾಣದ ಆವರಣದಲ್ಲಿ ಸದ್ಯ ಸಾವಿರಾರು ಪ್ರಯಾಣಿಕರು ಇದ್ದಾರೆ. ರೈಲ್ವೆ ಟಿಕೆಟ್ ತೋರಿಸಿದವರಿಗೆ ಮಾತ್ರ ನಿಲ್ದಾಣದ ಆವರಣಕ್ಕೆ ಪ್ರವೇಶ ನೀಡಲಾಗ್ತಿದೆ. ರೈಲು ಬರುವ ಒಂದು ತಾಸಿನ ಮುಂಚೆ ರೈಲ್ವೆ ನಿಲ್ದಾಣದ ಆವರಣಕ್ಕೆ ಎಂಟ್ರಿ ಕೊಡಲಾಗುತ್ತೆ. ನಿಲ್ದಾಣದ ಒಳಗೆ ಹಾಗೂ ಹೊರಗೆ ಸರಿಸುಮಾರು 3 ಸಾವಿರ ಸಂಖ್ಯೆಯಲ್ಲಿ ಪ್ರಯಾಣಿಕರು ನೆರೆದಿದ್ದಾರೆ. ಮಡದಿ ಮಕ್ಕಳ ಜೊತೆ ಗಂಟು ಮೂಟೆ ಸಮೇತ ಸ್ವಂತ ಊರುಗಳಿಗೆ ಹೊರಟಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಜನರನ್ನ ನಿಯಂತ್ರಿಸಲು ಮಾರ್ಷಲ್​​ಗಳು ಹಾಗೂ ಪೊಲೀಸರು ಹರಸಾಹಸಪಡುವಂತಾಗಿದೆ. ರೈಲ್ವೆ ಪೊಲೀಸರು, ಮಾರ್ಷಲ್​ಗಳು ಹಾಗೂ ಕಾಟನ್ ಪೇಟೆ ಪೊಲೀಸರು ಸೇರಿ 200ಕ್ಕೂ ಹೆಚ್ಚು ಮಂದಿಯನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ರೈಲ್ವೆ ನಿಲ್ದಾಣದ ಒಳಗೆ ರೈಲ್ವೆ ಪೊಲೀಸರು, ಆವರಣದಲ್ಲಿ ಮಾರ್ಷಲ್​ಗಳು ಹಾಗೂ ರೈಲು ನಿಲ್ದಾಣದ ಎರಡು ಬದಿಯ ರಸ್ತೆಯಲ್ಲಿ ಕಾಟನ್ಪೇಟೆ ಪೊಲೀಸರು ಪ್ರಯಾಣಿಕರನ್ನ ನಿಯಂತ್ರಣ ಮಾಡ್ತಿದ್ದಾರೆ. ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದೇ ಅಡ್ಡಾಡೋರಿಗೆ ಹಾಗೂ ಸರಿಯಾಗಿ ಮಾಸ್ಕ್ ಧರಿಸದವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತಿದೆ.

ಜನರು ಕೊರೊನಾ ಭೀತಿ ನಡುವೆಯೂ ಯಾವುದೇ ಅಂತರ ಕಾಪಾಡಿಕೊಳ್ಳದೇ ಗುಂಪು ಗುಂಪಾಗಿ ಕೂತಿರೋದು ಕಂಡುಬರ್ತಿದೆ. ನಾವು ಎಷ್ಟೇ ಹೇಳಿದ್ರು ಜನ ರುಕೇಳ್ತಿಲ್ಲ ಅಂತ ಮಾರ್ಷಲ್​ಗಳು ಬೇಸರ ವ್ಯಕ್ತಪಡಿಸಿದ್ದಾರೆ.

The post ಊರುಗಳತ್ತ ಹೊರಟ ಜನ, ರೇಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಪೊಲೀಸ್​-ಮಾರ್ಷಲ್ಸ್ ಹರಸಾಹಸ appeared first on News First Kannada.

Source: newsfirstlive.com

Source link