ಉಡುಪಿ: ಕೊರೊನಾ ಎರಡನೇ ಅಲೆಯ ತೀವ್ರತೆ ಬ್ರೇಕ್​ ಹಾಕಲು ರಾಜ್ಯ ಸರ್ಕಾರ ಕಠಿಣ ಲಾಕ್​ಡೌನ್​ ನಿಯಮಗಳ ಮೊರೆ ಹೋಗಿದ್ದು, ಪಾಸಿಟಿವ್​ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಸೋಂಕು ನಿಯಂತ್ರಣವಾದ ಕಾರಣ ಹಲವು ಜಿಲ್ಲೆಗಳಲ್ಲಿ ಲಾಕ್​​ಡೌನ್ ಮುಂದುವರಿಸಲು ನಿರ್ಧರಿಸಿದೆ.

ಆದರೆ ರಾಜಕೀಯ ನಾಯಕರು ಹಾಗೂ ಶಾಸಕರ ಕಾರ್ಯಕ್ರಮಗಳಲ್ಲಿ ಕೊರೊನಾ ನಿಯಮಗಳ ಉಲ್ಲಂಘಟನೆ ಮಾಡಲಾಗುತ್ತಿದೆ. ಉಡುಪಿ ಶಾಸಕರ ರಘುಪತಿ ಭಟ್ ಅವರ ‘ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ನಾಟಿ’ ಮಾಡುವ ಕಾರ್ಯಕ್ರಮ ಸಾಕ್ಷಿಯಾಗಿತ್ತು.

ಉಡುಪಿಯ ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರ ಕಾರ್ಯಕ್ರಮಕ್ಕೆ ಜನರ ಮಿತಿ ಇಲ್ಲ, ಸಾಮಾಜಿಕ ಅಂತ ಇಲ್ಲವೇ ಇರಲಿಲ್ಲ. ಕಾರ್ಯಕ್ರಮದಲ್ಲಿ ಶಾಸಕರ ರಘುಪತಿ ಭಟ್ ಸೇರಿದಂತೆ ಪಂಚಾಯತ್ ಸಿಇಒ ನವೀನ್ ಭಟ್, ಸೋದೆ ಮಠದ ಸ್ವಾಮಿಗಳು ಸಹಿತ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದರು. ಸರ್ಕಾರದ ನಿಯಮ ಪಾಲಿಸಬೇಕಾದವರೇ ನಿಯಮ ಉಲ್ಲಂಘನೆ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

The post ಊರೆಲ್ಲ ಕಾರ್ಯಕ್ರಮ ಮಾಡಗಿಂಲ್ಲ, ಆದ್ರೂ ಶಾಸಕರ ಕಾರ್ಯಕ್ರಮದಲ್ಲಿ ಜನವೋ ಜನ appeared first on News First Kannada.

Source: newsfirstlive.com

Source link