ಬೆಂಗಳೂರು: ನಾಡದ್ರೋಹಿ ಎಂಇಎಸ್ ಪುಂಡಾಟದ ವಿರುದ್ಧ ಕನ್ನಡಪರ ಸಂಘಟನೆಗಳು ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಿವೆ. ಡಿಸೆಂಬರ್ 31ನೇ ತಾರೀಕಿನ ಬಂದ್ಗೆ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಲಿದೆ ಎನ್ನಲಾಗಿತ್ತು. ಆದರೀಗ, ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಲು ಚಿತ್ರರಂಗ ನಿರ್ಧರಿಸಿದೆ.
ಈ ಸಂಬಂಧ ಮಾತಾಡಿದ ನಟ ಯಶ್, ಈಗ ಕರ್ನಾಟಕ ಬಂದ್ಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಬೆಳಗಾವಿ ಘಟನೆ ಬಗ್ಗೆ ಬಹಳ ಬೇಸರವಾಯ್ತು. ಮತ್ತೊಬ್ಬರ ಭಾಷೆಗೆ ತೊಂದರೆ ಮಾಡಿದ್ರೆ, ನಮಗೂ ಹಾಗೇ ಮಾಡ್ತಾರೆ ಅನ್ನೋದು ಅವ್ರು ಅರ್ಥ ಮಾಡ್ಕೊಬೇಕು. ಇದು ನಿಜಕ್ಕೂ ಖಂಡನೀಯ. ದೊಡ್ಡೋರು ಏನು ನಿರ್ಧಾರ ಮಾಡ್ತಾರೋ ಹಾಗೆ. ಬಂದ್ ಮಾಡಿದ್ರೆ ಸಾರ್ವಜನಿಕರಿಗೂ ತೊಂದರೆಯಾಗುತ್ತೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಅದಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತೆ ಎಂದರು.