ಎಂಎಸ್ ಧೋನಿ ಚಿತ್ರ ಹಂಚಿಕೊಂಡ WWE ಸೂಪರ್​ಸ್ಟಾರ್ ಜಾನ್ ಸೀನ! ಕಾರಣವೇನು? | WWE Superstar John Cena shares photo of Mahendra Singh Dhoni MS Dhoni in Instagram


ಎಂಎಸ್ ಧೋನಿ ಚಿತ್ರ ಹಂಚಿಕೊಂಡ WWE ಸೂಪರ್​ಸ್ಟಾರ್ ಜಾನ್ ಸೀನ! ಕಾರಣವೇನು?

ಎಂಎಸ್ ಧೋನಿ, ಜಾನ್ ಸೀನ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ವಿಚಾರ ಎಲ್ಲರಿಗೂ ತಿಳಿದೇ ಇರಬಹುದು. ಈಗ ಈ ವಿಷಯ ಹೇಳುವುದಕ್ಕೆ ವಿಶೇಷ ಕಾರಣ ಒಂದಿದೆ. ಅದೇನು ಎಂದರೆ, ಮಹೇಂದ್ರ ಸಿಂಗ್ ಧೋನಿ ಫೋಟೊ ಒಂದನ್ನು ಡಬ್ಲ್ಯು ಡಬ್ಲ್ಯು ಇ ಸೂಪರ್ ಸ್ಟಾರ್ ಜಾನ್ ಸೀನ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಧೋನಿ, ಜಾನ್ ಸೀನಾ ಸೋಷಿಯಲ್ ಮೀಡಿಯಾದಲ್ಲಿ ಕಂಡು ಕುತೂಹಲ ಹುಟ್ಟಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಹಾಗೂ ರಸ್ಲಿಂಗ್ ಅಭಿಮಾನಿಗಳು ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಜಾನ್ ಸೀನಾ ತಮ್ಮ ಸೋಷಿಯಲ್ ಮೀಡಿಯಾ, ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಫೋಟೊ ಅಪ್​ಲೋಡ್ ಮಾಡಿದ್ದಾರೆ. ಆದರೆ, ಅಲ್ಲಿ ಯಾವುದೇ ಕ್ಯಾಪ್ಶನ್ ಅವರು ಬರೆದಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಫೋಟೊ ಹಂಚಿಕೊಂಡ ವಿಚಾರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಏನೇ ಆದರೂ ಜಾನ್ ಸೀನ ಕೂಡ ಧೋನಿ ಅಭಿಮಾನಿಯೋ ಎಂಬ ಪ್ರಶ್ನೆ ಮತ್ತು ವಿಷಯ ಕಂಡುಬಂದಿದೆ. ಈ ಫೋಟೊವನ್ನು ಟಿ20 ವಿಶ್ವಕಪ್ ಸಂದರ್ಭವೇ ಅವರು ಹಂಚಿಕೊಂಡಿದ್ದಾರೆ.

ಜಾನ್ ಸೀನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೊದಲ್ಲಿ ಮಹೇಂದ್ರ ಸಿಂಗ್ ಧೋನಿ ಯಾರದೋ ಕೈ ಕುಲುಕಲು ಮೆಟ್ಟಿಲು ಇಳಿದು ಬರುತ್ತಿರುವುದು ಕಂಡುಬರುತ್ತಿದೆ. ಚಿತ್ರದಲ್ಲಿ ಧೋನಿ ಮಾತ್ರ ಕಾಣಿಸಿಕೊಂಡಿದ್ದಾರೆ. ಮತ್ತೊಂದು ವ್ಯಕ್ತಿ ಅಲ್ಲಿ ಕಾಣುತ್ತಿಲ್ಲ. ಈ ಚಿತ್ರವನ್ನು ಜಾನ್ ಸೀನ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಪೋಸ್ಟ್ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಜನ ಇದನ್ನು ಲೈಕ್ ಮಾಡಿದ್ದಾರೆ. ಹಲವರು ಈ ಚಿತ್ರದ ಬಗ್ಗೆ ವಿಶೇಷ ಕಮೆಂಟ್​ಗಳನ್ನು ಮಾಡಿದ್ದಾರೆ.

ಜಾನ್ ಸೀನ ಭಾರತೀಯ ಸೆಲೆಬ್ರಿಟಿಗಳ ಚಿತ್ರವನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಅವರು ಧೋನಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೊದಲು ಜಾನ್ ಸೀನ, ವಿರಾಟ್ ಕೊಹ್ಲಿ, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಐಶ್ವರ್ಯ ರೈ ಚಿತ್ರಗಳನ್ನು ಹಂಚಿಕೊಂಡಿದ್ದರು.

ಡಬ್ಲ್ಯು ಡಬ್ಲ್ಯು ಇ ಚಾಂಪಿಯನ್ ಜಾನ್ ಸೀನಗೆ ಸೋಷಿಯಲ್ ಮೀಡಿಯಾ ಇನ್​ಸ್ಟಾಗ್ರಾಂ ಖಾತೆಯಲ್ಲಿ 16.7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಜಾನ್ ಸೀನ ಭಾರತದಲ್ಲಿ ಕೂಡ ಹೆಸರುವಾಸಿ ಕುಸ್ತಿಪಟು ಆಗಿದ್ದಾರೆ. ಅವರ ಸ್ಟೈಲ್​ಗೆ ಹಲವಷ್ಟು ಜನ ಮಾರುಹೋದವರಿದ್ದಾರೆ. ಇದೀಗ ಜಾನ್ ಸೀನ ಧೋನಿ ಚಿತ್ರ ಹಂಚಿಕೊಂಡಿರುವುದು ಸದ್ದು ಮಾಡಿದೆ.

ಇದನ್ನೂ ಓದಿ: T20 World Cup 2021: ಮೆಂಟರ್ ಧೋನಿ ಮಾಸ್ಟರ್​ ಪ್ಲ್ಯಾನ್: ಆರಂಭಿಕರಿಗೆ 3 ಟಾರ್ಗೆಟ್

ಇದನ್ನೂ ಓದಿ: ನಟ ಅರ್ಷದ್ ವಾರ್ಸಿ ಫೋಟೋ ಪೋಸ್ಟ್​ ಮಾಡಿದ WWE ಸೂಪರ್​ ಸ್ಟಾರ್​​ ಜಾನ್​ ಸೀನಾ; ಕಾರಣವೇನು?

TV9 Kannada


Leave a Reply

Your email address will not be published.