ಹುಬ್ಬಳ್ಳಿ: ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಕಾರೊಂದು ನಡು ರಸ್ತೆಯಲ್ಲಿಯೇ ಧಗಧಗಿಸಿದ ಘಟನೆ ನಗರದ ಗಬ್ಬೂರು ಬೈಪಾಸ್ ಬಳಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ಉಂಟಾಗಿ ಎಂಜಿನ್ಗೆ ಬೆಂಕಿ ಹತ್ತಿಕೊಂಡು ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ನಲ್ಲಿದ್ದವರು ಹೊರ ಬಂದಿದ್ದಾರೆ. ಅಗ್ನಿಯ ಕೆನ್ನಾಲಿಗೆಗೆ ಕಾರ್ ಕೆಲವೇ ಹೊತ್ತಿನಲ್ಲಿ ಸುಟ್ಟು ಕರಕಲಾಗಿದೆ. ಸದ್ಯ ಕಾರ್ನ ಮಾಲೀಕರು ಯಾರು ಎಲ್ಲಿಗೆ ಹೊರಟಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸುತ್ತಿದ್ದಾರೆ.