ನವದೆಹಲಿ: ವಿಮಾನ ಪ್ರಯಾಣಿಕರು ಮತ್ತು ಭದ್ರತಾ ಅಧಿಕಾರಿಗಳು ಸೇರಿ ರನ್ ವೇಯಿಂದ ವಿಮಾನವನ್ನೇ ತಳ್ಳಿದ ಪ್ರಸಂಗ ನೇಪಾಳದ ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ತಾರಾ ಏರ್ ವಿಮಾನವು ಟೈರ್ ಸ್ಫೋಟಗೊಂಡ ನಂತರ ಏರ್‌ಸ್ಟ್ರಿಪ್‌ನಲ್ಲಿ ಸಿಲುಕಿಕೊಂಡಿತ್ತು. ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಅದರ ಹಿಂದಿನ ಟೈರ್ ಸ್ಫೋಟಗೊಂಡಿದೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪೈಲಟ್‌ಗೆ ತುರ್ತು ತಂತ್ರಗಳನ್ನು ಮಾಡಲು ಸಾಧ್ಯವಾದರೂ, ಅದನ್ನು ರನ್ ವೇಯಿಂದ ಸರಿಸಲು ಸಾಧ್ಯವಾಗಲಿಲ್ಲ.
ಸಿಕ್ಕಿಬಿದ್ದ ವಿಮಾನದಿಂದ ಟ್ಯಾಕ್ಸಿ ದಾರಿ ನಿರ್ಬಂಧವಾಗಿದ್ದರಿಂದ ಹಾಗೂ ಮತ್ತೊಂದು ವಿಮಾನವು ಇಳಿಯಲು ಸಾಧ್ಯವಾಗದೇ ಇದ್ದುದರಿಂದ ಭದ್ರತಾ ಸಿಬ್ಬಂದಿ ಹಾಗೂ ಪ್ರಯಾಣಿಕರೇ ವಿಮಾನವನ್ನ ತಳ್ಳಿದ್ರು.
After tyre burst, people of Bajura Airport, Nepal trying to clear Runway as some flight were on standby for landing pic.twitter.com/WKQHS1Kkui
— Defence Detectives 🇮🇳 (@defenceDetectiv) December 2, 2021