ಸಂಚಾರಿ ವಿಜಯ್​ ಅವರು ಯಾವುದೇ ಪಾತ್ರ ಕೊಟ್ಟರೂ ಸುಲಲಿತವಾಗಿ ಅದಕ್ಕೆ ಒಗ್ಗಿಕೊಳ್ಳುತ್ತಾರೆ. ಅರಿವು, ನಾನು ಅವನಲ್ಲ ಅವಳು ಸಿನಿಮಾದಿಂದ ಹಿಡಿದು ಇತ್ತೀಚಿನ ಜೆಂಟಲ್​​ಮನ್​ ಸಿನಿಮಾವರೆಗೂ ಅವರು ಅದನ್ನು ಸಾಬೀತು ಪಡಿಸಿದ್ದಾರೆ. ವಿಜಯ್​​ ಅವರನ್ನು ಕಳೆದುಕೊಂಡ ಚಿತ್ರರಂಗ ಮಾತ್ರವಲ್ಲದೇ ಕರ್ನಾಟಕದ ಜನತೆಯೂ ಬಹುದೊಡ್ಡ ನಷ್ಟವನ್ನು ಎದುರುಸಿದೆ. ವಿಜಯ್​​ ಅವರ ನಿಧನದ ಬಳಿಕ ಅವರ ‘ತಲೆದಂಡ’ ಸಿನಿಮಾ ಟೀಸರ್​ ಎಲ್ಲೆಡೆ ವೈರಲ್​​ ಆಗಿದ್ದು, ಭಾರೀ ಮೆಚ್ಚುಗೆ ಕೇಳಿ ಬರುತ್ತಿದೆ.

 

ತಲೆ ದಂಡ ಸಿನಿಮಾ ಕರ್ನಾಟಕದಲ್ಲಿ ನಡೆಯುವ ಘಟನೆಯೊಂದಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ, ಇಡೀ ಜಗತ್ತಿಗೆ ಸಂಬಂಧಿಸಿದೆ. ಸಿನಿಮಾದಲ್ಲಿ ಬುದ್ಧಿಮಾಂದ್ಯನ ಪಾತ್ರದಲ್ಲಿ ನಟಿಸಿರುವ ವಿಜಯ್​, ಪ್ರಕೃತಿಗೆ ಅನಾಯ್ಯ ಮಾಡುವವರ ವಿರುದ್ಧ ಹೋರಾಟ ಮಾಡುವ ಕಥೆಯನ್ನು ಚಿತ್ರ ಹೊಂದಿದೆ. ಚಿತ್ರದ ಟ್ರೈಲರ್ ನೋಡುವ ಪ್ರತಿಯೊಬ್ಬ ಕಣ್ಣಿನಲ್ಲೂ ನೀರು ತರಿಸುವಂತಿದೆ. ತಲೆದಂಡ ಸಿನಿಮಾದ ಪಾತ್ರದಲ್ಲಿ ನಟಿಸಲು ವಿಜಯ್​ ಅವರು ನಾಲ್ಕು ದಿನ ವಿಶೇಷ ಮಕ್ಕಳ ಶಾಲೆಯಲ್ಲೇ ತಂಗಿದ್ದರು. ಈ ಸಿನಿಮಾ ನಟನಗೆ ಅವರಿಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಸಿಗುವ ಎಲ್ಲಾ ಸಾಧ್ಯತೆಗಳು ಇದೆ.

ಪರಿಸರ ಮತ್ತು ಮಾನವನ ನಡುವಿನ ಸಂಬಂಧವನ್ನು ಹಾಗೂ ಪ್ರಕೃತಿಯ ಮೇಲೆ ನಡೆಯುತ್ತಿರುವ ಅತ್ಯಾಚಾರ ಸೇರಿದಂತೆ ಕಳಕಳಿಯ ಅಂಶಗಳನ್ನು ಹೊಂದಿದೆ. ಈ ಹಿಂದೆ ಬೆಂಗಳೂರು ಅಂತರ್​​ರಾಷ್ಟ್ರೀಯ ಚಲನಚಿತ್ರ ಸಿನಿಮೋತ್ಸವದಲ್ಲಿ ಚಿತ್ರವನ್ನು ಪರಿಗಣಿಸದ ಕಾರಣಕ್ಕೆ ವಿಜಯ್​ ಅವರು ಅಸಾಮಾಧಾನವನ್ನು ಹೊರಹಾಕಿದ್ದರು. ಸಿನಿಮಾ 2020ರಲ್ಲೇ ಸ್ಕ್ರೀನಿಂಗ್ ಆಗಿದೆ. ಆದರೆ ಸಿನಿಮಾವನ್ನು ಪರಿಸದ ಕಾರಣ ನನಗೆ ಬಹಳ ಬೇಸರವಾಗಿದೆ ಎಂದು ಹೇಳಿದ್ದರು. ಇನ್ನು ಕೊರೊನಾ ಸಂಕಷ್ಟದ ಕಾರಣ ತಲೆದಂಡ ಸಿನಿಮಾ ಇನ್ನು ಥಿಯೇಟರ್​ಗೆ ಬಿಡುಗಡೆಯಾಗಿಲ್ಲ. ಕೊರೊನಾ ಮುಕ್ತಾಯವಾಗುತ್ತಿದಂತೆ ಸಿನಿಮಾ ಬಿಡುಗೆಯಾಗುವ ಸಾಧ್ಯತೆ ಇದೆ.

ತಲೆದಂಡ ಸಿನಿಮಾಗೆ ಪ್ರವೀಣ್ ಕೃಪಕರ್ ನಿರ್ದೇಶನವಿದ್ದು, ಹರಿ ಕಾವ್ಯ ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಮಂಗಳಾ ರಘು, ಬಿ.ಸುರೇಶ್​, ಮಂಡ್ಯ ರಮೇಶ್, ರಮೇಶ್ ಪಂಡಿತ್, ಚೈತ್ರ ಆಚಾರ್ ಸೇರಿದಂತೆ ಹಲವು ನಟಿಸಿದ್ದಾರೆ.

The post ಎಂಥ ಅದ್ಭುತ ನಟನೆ..! ‘ತಲೆದಂಡ’ ಚಿತ್ರದ ಒಂದೊಂದು ದೃಶ್ಯದಲ್ಲೂ ಕಣ್ಣು ಒದ್ದೆಯಾಗಿಸ್ತಾರೆ ವಿಜಯ್ appeared first on News First Kannada.

Source: newsfirstlive.com

Source link