ಎಂದಿಗೂ ಮುಗಿಯದ ಪುನೀತ್​ ರಾಜ್​ಕುಮಾರ್​ ನೆನಪು; ಇಲ್ಲಿವೆ ಅತಿ ಅಪರೂಪದ ಫೋಟೋಗಳು | Puneeth Rajkumar Photos: Raghavendra Rajkumar shares rare pics of his brother Appu

1/7

ಡಾ. ರಾಜ್​ಕುಮಾರ್ ಮತ್ತು ಪಾರ್ವತಮ್ಮ ದಂಪತಿಯ​ ಕಿರಿಯ ಪುತ್ರ ಪುನೀತ್​ ರಾಜ್​ಕುಮಾರ್​. ಹಾಗಾಗಿ ಅಪ್ಪು ಎಂದರೆ ಅವರ ಇಡೀ ಕುಟುಂಬದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು.

2/7

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅವರ ಅಪಾರ ಅಭಿಮಾನಿ ಬಳಗ ತೀವ್ರ ನೋವಿನಲ್ಲಿದೆ.

3/7

ಗಾಜನೂರಿನಲ್ಲಿ ಡಾ. ರಾಜ್​ಕುಮಾರ್​ ಅವರು ಹುಟ್ಟಿ ಬೆಳೆದ ಮನೆ ಇದೆ. ಅದು ಅಣ್ಣಾವ್ರ ಮಕ್ಕಳ ಫೇವರಿಟ್​ ಸ್ಥಳ. ಪುನೀತ್​ ಕೂಡ ಅಲ್ಲಿಗೆ ಆಗಾಗ ಭೇಟಿ ನೀಡುತ್ತಿದ್ದರು.

4/7

ಅಣ್ಣಾವ್ರದ್ದು ಕಲಾವಿದರ ಕುಟುಂಬ. ಡಾ. ರಾಜ್​ಕುಮಾರ್​ ರೀತಿಯೇ ಅವರ ಪುತ್ರರು ಕೂಡ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಇನ್ನೂ ಸಾಧಿಸಬೇಕಾದ್ದು ಬಹಳ ಇರುವಾಗಲೇ ಅಪ್ಪು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ.

5/7

ಅಮ್ಮನ ಪ್ರೀತಿಯ ಮಗನಾಗಿದ್ದರು ಅಪ್ಪು. ಚಿಕ್ಕ ವಯಸ್ಸಿನಿಂದಲೂ ಪುನೀತ್​ ರಾಜ್​ಕುಮಾರ್​ ಅವರ ನಟನೆಗೆ ಪಾರ್ವತಮ್ಮ ರಾಜ್​ಕುಮಾರ್​ ಅವರು ಸಖತ್​ ಪ್ರೋತ್ಸಾಹ ನೀಡುತ್ತಿದ್ದರು.

6/7

ರಾಘವೇಂದ್ರ ರಾಜ್​ಕುಮಾರ್​ ಅವರು ಅನಾರೋಗ್ಯದ ಬಳಿಕ ಚೇತರಿಸಿಕೊಂಡು ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಿದ್ದಾಗ ಪುನೀತ್ ರಾಜ್​ಕುಮಾರ್​ ತುಂಬ ಖುಷಿಪಟ್ಟಿದ್ದರು. ಸಹೋದರನ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಆದರೆ ಇಂದು ಅಪ್ಪು ನಮ್ಮೊಂದಿಗಿಲ್ಲ.

7/7

ಪಾರ್ವತಮ್ಮ ರಾಜ್​ಕುಮಾರ್​ ಅವರ ಕುರಿತು ಪುಸ್ತಕ ಬರೆಯಬೇಕು ಎಂದು ಪುನೀತ್​ ಆಸೆ ಇಟ್ಟುಕೊಂಡಿದ್ದರು. ಚಿತ್ರರಂಗದಲ್ಲಿ ತಮ್ಮ ತಾಯಿ ಮಾಡಿದ ಸಾಧನೆಗಳನ್ನು ಆ ಪುಸ್ತಕದಲ್ಲಿ ವಿವರಿಸುವುದು ಅವರ ಉದ್ದೇಶವಾಗಿತ್ತು. ಆ ಕೆಲಸವನ್ನೆಲ್ಲ ಬಿಟ್ಟು ಅಪ್ಪು ಬಾರದ ಊರಿಗೆ ಹೋಗಿದ್ದಾರೆ.

TV9 Kannada

Leave a Reply

Your email address will not be published. Required fields are marked *