ಎಐಸಿಸಿ ಕಚೇರಿಯಲ್ಲಿ ಕನ್ನಡಕ ಕಳೆದುಕೊಂಡ ಸಿದ್ದರಾಮಯ್ಯ.. ಹೊಸದು ಕೊಡಿಸ್ತೀನಿ ಅಂದ್ರಂತೆ ಜಮೀರ್

ಎಐಸಿಸಿ ಕಚೇರಿಯಲ್ಲಿ ಕನ್ನಡಕ ಕಳೆದುಕೊಂಡ ಸಿದ್ದರಾಮಯ್ಯ.. ಹೊಸದು ಕೊಡಿಸ್ತೀನಿ ಅಂದ್ರಂತೆ ಜಮೀರ್

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಎಐಸಿಸಿ ಕಚೇರಿಯಲ್ಲಿ ಕನ್ನಡಕ ಕಳೆದುಕೊಂಡಿದ್ದಾರೆ. ನನ್ನ ಕನ್ನಡಕ ಎಲ್ಲಿಹೋಯ್ತು ಎನ್ನುತ್ತಾ ಸುಮಾರು ಹೊತ್ತು ಸಿದ್ದರಾಮಯ್ಯ ಕನ್ನಡಕಕ್ಕಾಗಿ ಹುಡುಕಾಟ ನಡೆಸಿದ್ದಾರಂತೆ.

ಕನ್ನಡಕ ಕಳೆದುಕೊಂಡು ಕಂಗಾಲಾದ ಸಿದ್ದರಾಮಯ್ಯ ಸುಮಾರು ಹೊತ್ತು ಕನ್ನಡಕಕ್ಕಾಗಿ ಹುಡುಕಾಡಿದ್ದಾರೆ. ಕನ್ನಡಕ ಸಿಗದೇ ತಲೆಕೆಡಿಸಿಕೊಂಡ ಸಿದ್ದರಾಮಯ್ಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್ ಸುರ್ಜೇವಾಲ ಕೂಡ ಕನ್ನಡಕಕ್ಕಾಗಿ ಹುಡುಕಾಡಿದ್ದಾರಂತೆ. ಕೊನೆಗೆ ಜಮೀರ್ ಅಹ್ಮದ್ ನಾನೇ ನಾಳೆ ನಿಮಗೆ ಹೊಸ ಕನ್ನಡಕ ತಂದುಕೊಡುತ್ತೇನೆ ಎಂದು ಭರವಸೆ ನೀಡಿದ್ದಾರಂತೆ.

The post ಎಐಸಿಸಿ ಕಚೇರಿಯಲ್ಲಿ ಕನ್ನಡಕ ಕಳೆದುಕೊಂಡ ಸಿದ್ದರಾಮಯ್ಯ.. ಹೊಸದು ಕೊಡಿಸ್ತೀನಿ ಅಂದ್ರಂತೆ ಜಮೀರ್ appeared first on News First Kannada.

Source: newsfirstlive.com

Source link