ಕೋವಿಡ್​ನ ಸಾಮಾನ್ಯ ರೋಗ ಲಕ್ಷಣಗಳಿದ್ದರು ಅದನ್ನು ಪರೀಕ್ಷಿಸಿ ಸೋಂಕಿತ ಎಂದು ದೃಢ ಪಡುವುದು, ಆರ್​ಟಿಪಿಸಿಆರ್ ಟೆಸ್ಟ್ಗಳಲ್ಲಿ ಪಾಸಿಟಿವ್ ಎಂದು ವರದಿ ಬಂದಮೇಲೆ. ಅಲ್ಲಿಯ ತನಕ ಎಲ್ಲರು ಭಯದಿಂದ ಇರುವಂತಾಗಿದೆ ಪರಿಸ್ಥಿತಿ. ಟೆಸ್ಟಿಂಗ್ ಪ್ರೊಸೆಸ್ ವೇಗಗೊಳಿಸಲು ಬೇರೆ ಬೇರೆ ಪ್ಲಾನ್​ಗಳು ನಡಿತಾನೆ ಇದೆ. ಈಗ ಡಿಆರ್​ಡಿಓ ಸಂಸ್ಥೆ ಹೊಸ ತಂತ್ರಜ್ಞಾನವೊಂದನ್ನ ಅಭಿವೃದ್ಧಿ ಮಾಡಿದೆ. ಇದ್ರಲ್ಲಿ ಕೇವಲ ಎಕ್ಸ್-ರೇ ನೋಡಿ ಕೋವಿಡ್ ಸೋಂಕು ಪತ್ತೆ ಮಾಡ್ಬಹುದಂತೆ.

ಆತ್ಮನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್.. ಹೀಗೊಂದು ಪ್ರೋಗ್ರಮ್ ಅನ್ನು ಭಾರತೀಯ ಡಿಫೆನ್ಸ್ ರೀಸರ್ಚ್ ಅಂಡ್ ಡೆವಲಪ್​ಮೆಂಟ್ ಆರ್ಗನೈಸೇಷನ್ ಮತ್ತು ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ರೋಬೋಟಿಕ್ಸ್ ಕಂಡುಹಿಡಿದಿದೆ.

ಇನ್ಮೇಲೆ ಎಕ್ಸ್ರೇ ನೋಡಿಕೊಂಡೆ ಕೋವಿಡ್ ಪತ್ತೆ
ಸಿ.ಟಿ ಸ್ಕ್ಯಾನ್ ಗಿಂತ ನಿಖರ,ಅಷ್ಟೇ ಅಲ್ಲ ತುಂಬ ಅಗ್ಗ

ಪ್ರೈಮರಿ ಕಾಂಟ್ಯಾಕ್ಟ್ ಆಗಿದ್ದರೆ ಅಥವಾ ರೋಗ ಲಕ್ಷಣಗಳು ಕಾಣಿಸುತ್ತಿದ್ದರೆ ತಕ್ಷಣ ಆರ್-ಟಿ-ಪಿ-ಸಿ-ಆರ್ ಪರೀಕ್ಷೆಗೆ ಗುರಿ ಆಗಬೇಕು. ಟೆಸ್ಟ್ ಮಾಡ್ಸಬೇಕೆಂದ್ರೆ ದಿನವಿಡಿ ಸಾಲಿನಲ್ಲಿ ನಿಂತು ಕಾಯಬೇಕು. ಅದರ ನಡುವೆ ಸೋಂಕಿತರು ಇನ್ನಂದಷ್ಟು ಸುಸ್ತಾಗಿ ಹೋಗಿರುತ್ತಾರೆ. ಅಲ್ಲದೆ ಈ ಎರಡನೇ ಅಲೆಯಲ್ಲಿ ನೆಸಲ್ ಟೆಸ್ಟ್ ಹಾಗೂ ಸ್ವಾಬ್ ಟೆಸ್ಟ್ ನಲ್ಲಿ ನೆಗಿಟೀವ್ ತೋರಿಸಿದರೂ ಶ್ವಾಸಕೋಶದಲ್ಲಿ ಕೊರೊನಾ ಕುಳಿತು ಕೊನೆಯ ಹಂತ ತಲುಪಿರುವುದು ಎಷ್ಟೋ ಕೇಸ್ ಗಳು ದಾಖಲಾಗಿವೆ. ಇದನ್ನೆಲ್ಲ ಬೇದಿಸಲು ಇನ್ಮೆಲೆ ಎಕ್ಸ್ ರೇ ಮೂಲಕ ಕೋವಿಡ್ ಪತ್ತೆ ಹಚ್ಚುವ ಹೊಸ ಪ್ಲಾನ್ ರೆಡಿಯಾಗಿದೆ. ಇದು ಮಾರುಕಟ್ಟೆಗೆ ಬಂದ್ರೆ ಎಲ್ಲ ಟೆಸ್ಟ್ ಗಿಂತ ಸ್ಪೀಡ್, ಅಕ್ಯೂರೇಟ್ ಮತ್ತು ಚೀಪರ್.

ಶೇಕಡಾ 97 ರಷ್ಟು ಆಕ್ಯೂರೇಟ್ ಫಲಿತಾಂಶ
ಡಿ.ಆರ್.ಡಿ.ಓ ಕೈಯಲ್ಲಿ ರೆಡಿ ಇರುವ ಪ್ರೋಗ್ರಾಂ

ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ತೋರಿದ್ದರು ಸೋಂಕು ಇರುವುದು ಸಿಟಿ ಸ್ಕ್ಯಾನ್ ಗಳ ಮೂಲಕ ಪತ್ತೆ ಹಚ್ಚಾಲಾಗುತ್ತಿತ್ತು. ಲಂಗ್ಸ್ ಗಳನ್ನು ಭಾಗ ಮಾಡಿ ಎಲ್ಲಿ ವೈರಸ್ ತನ್ನ ಪ್ರಭಾವ ಭೀರಿದೆ ಎನ್ನುವುದನ್ನು ಪತ್ತೆ ಹಚ್ಚಾಲಾಗುತ್ತಿತ್ತು. ಅಲ್ಲದೆ ಸಿ-ಟಿ ಸ್ಕ್ಯಾನ್ ಮಾಡಿಸುವುದು ದುಬಾರಿ. ಇದನ್ನೆಲ್ಲ ಮುಂದಿಟ್ಟುಕೊಂಡು ಸೊಂಕಿನ ಪತ್ತೆ ಹಾಗೂ ತೀವ್ರತೆಯ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ಈ ಪ್ಲಾನ್ ಸಿದ್ಧವಾಗಿದೆ. ಎದೆಯ ಎಕ್ಸ್​-ರೇಗಳ ಮೂಲಕ ಕೋವಿಡ್​-19 ಶೀಘ್ರವಾಗಿ ಪತ್ತೆ ಮಾಡುವುದಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಗಿರೋದ್ರಿಂದ ಅನ್ನು ಡಿ.ಆರ್.ಡಿ.ಒ ತಯಾರು ಮಾಡಿದೆ. ಇದನ್ನು ಡೆವಲಪ್ ಮಾಡಿದವರ ಪ್ರಕಾರ ಎದೆ ಭಾಗವನ್ನು ಎಕ್ಸ್​ರೇ ಸ್ಕ್ರೀನಿಂಗ್​ಗೆ ಒಳಪಡಿಸಲಾಗುತ್ತದೆ. ಲಂಗ್ಸ್ ನಲ್ಲಿ ಆಗಿರುವ ಇನ್​ಫೆಕ್ಷನ್ ಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ಈ ಹಿಂದೆಯೂ ಇತ್ತು ಎಕ್ಸರೇ ಮೂಲಕ ಪತ್ತೆ ವಿಧಾನ
ನಿಖರ ಫಲಿತಾಂಶಕ್ಕಾಗಿ ಮುಂದುವರೆದ ಸಂಶೋಧನೆ

ಕೋವಿಡ್ ಇದ್ದು ಲಕ್ಷಣಗಳು ತೋರದಿದ್ದಾಗ ಎಕ್ಸ್-ರೇ ಶೀಟ್ ಹಿಡಿದು ಕೋವಿಡ್ ಇನ್ಫೆಕ್ಷನ್ ಪತ್ತೆ ಹಚ್ಚಲಾಗುತ್ತಿತ್ತು. ಇದು ಕೇವಲ ಇನ್ಫೆಕ್ಷನ್ ಗಳ ಸ್ಫಾಟಿಂಗ್ಸ್ ಗಳನ್ನು ತೋರಿಸುತ್ತಿತ್ತು. ಆದರೆ ಇದು ಕೋವಿಡ್ ನಿಂದ ಆಗಿದೆ ಎನ್ನುವದಕ್ಕೆ ಯಾವುದೆ ಸಾಕ್ಷ್ಯಾಧಾರಗಳು ಇರಲಿಲ್ಲ. ಆದರೆ ಕೊರೊನಾ ಇರುವ ನಿಖರ ಮಾಹಿತಿಗಾಗಿ ಡಿ.ಆರ್.ಡಿ.ಒ ಈ ತಂತ್ರಜ್ಞಾನಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ಕೊರೊನಾ ಇರುವುದು ನಿಜವೂ ಇಲ್ಲವೂ ಎನ್ನುವುದನ್ನು ಪತ್ತೆ ಹಚ್ಚುತ್ತದೆ. ಇದನ್ನು ಈಗಾಗಲೆ ಟೆಸ್ಟಿಂಗ್ ಫೇಸ್ ನಲ್ಲಿ ಶೇಕಡ 96 ರಷ್ಟು ನಿಖರ ಫಲಿತಾಂಶ ಕಂಡು ಬಂದಿದೆ.

ರೇಡಿಯಾಲಜಿಸ್ಟ್​ ಗಳಿಂದ ಕೊರೊನಾ ಪತ್ತೆ
ಎಕ್ಸ್-ರೇಗಳಿಂದ ಬರಲಿದೆ ಶೀಘ್ರ ಫಲಿತಾಂಶ

ದೇಶದಲ್ಲಿ ಎಲ್ಲಡೆ ಕೊರೊನಾವೈರಸ್​ ಪರೀಕ್ಷೆಗೆ ಇರುವ ವ್ಯವಸ್ಥೆ ಸೀಮಿತವಾಗಿದೆ. ಎಕ್ಸ್​-ರೇಗಳನ್ನು ಬಳಸಿ ಶೀಘ್ರವಾಗಿ ಫಲಿತಾಂಶವನ್ನು ಕಂಡುಹಿಡಿಯುವುದಕ್ಕೆ ಆರ್ಟಿಫಿಷಿಯನ್ ಇಂಟೆಜೆನ್ಸ್ ಸಾಧನ ಅಭಿವೃದ್ಧಿ ಪಡಿಸುವುದಕ್ಕೆ ಬಹಳ ಪ್ರಯತ್ನಗಳು ನಡೆದಿದ್ದು. ಕೋವಿಡ್​ 19 ಅನ್ನು ಸೂಚ್ಯವಾಗಿ ರೇಡಿಯಾಲಜಿ ಮೂಲಕ ತಾನಾಗಿಯೇ ಪತ್ತೆ ಹಚ್ಚಲು ಸಹಾಯ ಆಗುತ್ತದೆ. ವಿವಿದ ರೀತಿಯ ಕೋವಿಡ್ ಟೆಸ್ಟ್ ಗಳನ್ನು ಮಾಡಲು ಆರೋಗ್ಯ ಕರ್ತರ ಅಭಾವ ಇತ್ತು. ಇನ್ನು ಈ ತಂತ್ರಜ್ಞಾನವನ್ನು ವಿಶೇಷವಾಗಿ ತುರ್ತು ಸಂದರ್ಭದಲ್ಲಿ ಪರೀಕ್ಷಿಸುವುದಕ್ಕೆ ಫಿಜಿಷಿಯನ್​ಗಳು ಮತ್ತು ರೇಡಿಯಾಲಜಿಸ್ಟ್​ಗಳಿಗೆ ಅವಕಾಶ ಮಾಡಿಕೊಡಬಹುದಾಗಿದೆ.

ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನಲೆ ಪಟ್ಟಣ ಬಿಟ್ಟು ಹಳ್ಳಿಗಳಲ್ಲೂ ಸೋಂಕಿತರು ಕಾಣಿಸುವಂತಾಗಿದೆ. ಆದರೆ ಹಳ್ಳಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಗಳ ವ್ಯವಸ್ಥೆ ಇರುವುದಿಲ್ಲ. ಆದರೆ ಎಕ್ಸ್-ರೇ ಡಿವೈಸ್ ಎಲ್ಲ ಬಹಳಷ್ಟು ಹಳ್ಳೀಗಳಲ್ಲೂ ಇರುವುದರಿಂದ ಈ ತಂತ್ರಜ್ಞಾನ ಬಹಳ ಅನುಕೂಲವಾಗಲಿದೆ. ಅಲ್ಲದೆ ಎಕ್ಸ್​ರೇ ಬಳಸಿ ರೋಗವನ್ನು ಪತ್ತೆ ಹಚ್ಚುವುದು ವೇಗವಾಗಿ ಆಗುತ್ತದೆ. ಖರ್ಚು ಕಡಿಮೆ ಮತ್ತು ಪರಿಣಾಮಕಾರಿಯಾಗಿರುತ್ತದೆ. ಇದರಿಂದ ಸಿಟಿ ಸ್ಕ್ಯಾನ್ ಗಳನ್ನು ಮಾಡುತ್ತಿದ್ದ ರೇಡಿಯಾಲಜಿಸ್ಟ್​ಗಳ ಮೇಲಿನ ಹೊರೆ ಕಡಿಮೆ ಆಗುತ್ತದೆ. ಸದ್ಯಕ್ಕೆ ಕೋವಿಡ್​ಗೆ ಬಳಸುವ ಸಿ.ಟಿ. ಮಶೀನ್​ಗಳನ್ನು ಬೇರೆ ಕಾಯಿಲೆಗಳಿಗೆ ಬಳಸಬಹುದು ಎಂದು ಈ ಪ್ರೋಗ್ರಾಂನ ಡೆಲವಪರ್​ಗಳು ಹೇಳಿದ್ದಾರೆ. ಅಲ್ಲದೆ CAIR, DRDO ನಿರ್ದೇಶಕರ ಪ್ರತಿಕ್ರಿಯೆ ಹೀಗಿದೆ

ಕೋವಿಡ್- 19 ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಮತ್ತು ಶೀಘ್ರವಾಗಿ ಕೊರೊನಾ ಪತ್ತೆ ಹಚ್ಚಲು ಡಿ.ಆರ್.ಡಿ.ಒ ರೋಗ ಪತ್ತೆ ಹಚ್ಚುವ ಸಾಧನವನ್ನು ಕಂಡುಹಿಡಿದಿದ್ದರಿಂದ ಫ್ರಂಟ್​ಲೈನ್ ಸಹಭಾಗಿಗಳು ಮತ್ತು ಕ್ಲಿನಿಷಿಯನ್ಸ್​ಗಳಿಗೆ ಅನುಕೂಲವಾಗಲಿದೆ ಎಂದು ನಂಬಿದ್ದೇನೆ. ಆದಷ್ಟು ಶೀಘ್ರವಾಗಿ ಇದನ್ನು ಎಲ್ಲ ಆಸ್ಪತ್ರೆಗಳಲ್ಲಿ ಇನ್ ಸ್ಟಾಲ್ ಮಾಡಲಾಗುವುದು.
– ಡಾ. ಯು.ಕೆ. ಸಿಂಗ್, CAIR, DRDO ನಿರ್ದೇಶಕರು

ಈ ಮಧ್ಯೆ ರೇಡಿಯಾಲಜಿಸ್ಟ್​ ಡಿಜಿಟಲ್ ನೆಟ್​ವರ್ಕ್​ಗಳ 5C ನೆಟ್​ವರ್ಕ್ ದೇಶದಲ್ಲಿ 1000 ಆಸ್ಪತ್ರೆಗಳಲ್ಲಿ ಬಳಸಲು ನಿರ್ಧರಿಸಿದೆ. ಇದಕ್ಕೆ ಎಚ್​ಸಿಜಿ ಅಕೆಡಮಿಕ್ಸ್ ಬೆಂಬಲ ಪಡೆಯಲಾಗಿದೆ. ಈಗಿರುವ ಈ ಡಿವೈಸ್ ಗಳಿಂದ ಸಮಯಕ್ಕೆ, ಸರಿಯಾದ ಚಿಕಿತ್ಸೆ ಒದಗಿಸಲು ಸಹಾಯ ಆಗುತ್ತದೆ ಹಾಗೂ ಆಸ್ಪತ್ರೆಯಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗುತ್ತದೆ. ರೋಗಿಗಳು ಹಾಗೂ ಹೆಲ್ತ್​ಕೇರ್ ವ್ಯವಸ್ಥೆ ಮೇಲೆ ಹಣಕಾಸಿನ ಹೊರೆ ಆಗದಂತೆ ಇದು ಆಗುತ್ತದೆ. ಶ್ವಾಸಕೋಶದ ಕಾಯಿಲೆಯನ್ನು ಆರಂಭದಲ್ಲೇ ಕಂಡುಹಿಡಿಯಲು ಸಹಾಯ ಆಗುತ್ತದೆ ಎನ್ನುವುದು ಒಳ್ಳೆಯ ವಿಷಯವಾಗಿದೆ.

ದೇಶದಲ್ಲಿ ಕೇಸ್ ಗಳು ಹೆಚ್ಚಾಗುತ್ತಲೆ ಇದೆ. ಇನ್ನು ಕೆಲವರಿಗೆ ಸೋಂಕು ತಗುಲಿದರ ಬಗ್ಗೆ ಅರಿವೆ ಇಲ್ಲದೆ ಇರುತ್ತಾರೆ. ಟೆಸ್ಟ್ ಮಾಡಿ 2-3 ದಿನಗಳಾದ್ರೂ ರಿಪೋರ್ಟ್ ಸಿಗದಿರುವುದು ಇನ್ನಷ್ಟು ಆತಂಕ ಸೃಷ್ಟಿಸಿತ್ತು. ಆದರೆ ಈ ತಂತ್ರಜ್ಞಾನ ಅಳವಡಿಸಿದರೆ ಸೋಂಕಿತರನ್ನು ಟ್ರಾಕ್ ಮಾಡುವುದು ಸುಲಭವಾಗುತ್ತದೆ.

The post ಎಕ್ಸ್​​ರೇ ನೋಡಿ ಕೊರೊನಾ ಸೋಂಕು ಪತ್ತೆ- DRDOದಿಂದ ಸ್ಪಷಲ್ ಪ್ರೋಗ್ರಾಂ appeared first on News First Kannada.

Source: newsfirstlive.com

Source link